ಬಿಜೆಪಿ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮೇಲೆ ಯಡಿಯೂರಪ್ಪ ಅವರು ಯಾಕೆ ಪ್ರಚಾರಕ್ಕಾಗಿ ಓಡಾಡುತ್ತಿದ್ದಾರೆ? – ಸಿದ್ದರಾಮಯ್ಯ ಪ್ರಶ್ನೆ…

225
firstsuddi

ಶಿರಸಿ : ಬಿಜೆಪಿ ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಗೆದ್ದಾಗಿದೆ ಎಂದು ಹೇಳುತ್ತಿದ್ದಾರೆ. ಗೆಲುವು ಸಾಧಿಸಿದ್ದರೆ ಮತ್ತೆ ಯಾಕೆ ಚುನಾವಣಾ ಪ್ರಚಾರಕ್ಕಾಗಿ ಓಡಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ತಾಲ್ಲೂಕಿನ ಕಿರುವತ್ತಿ ಗ್ರಾಮದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ 15 ಕ್ಷೇತ್ರಗಳಲ್ಲೂ ಗೆಲುವನ್ನು ಸಾಧಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಗೆಲುವನ್ನು ಸಾಧಿಸಿದ್ದರೆ ಇಷ್ಟೆಲ್ಲಾ ಹಣವನ್ನು ಖರ್ಚು ಮಾಡಿ ಯಡಿಯೂರಪ್ಪ ಅವರು ಯಾಕೆ ಚುನಾವಣಾ ಪ್ರಚಾರಕ್ಕೆ ಓಡಾಡಬೇಕು. ಚುನಾವಣೆಗಾಗಿ ಬೇಕಾಬಿಟ್ಟಿ ಹಣವನ್ನು ಯಾಕೆ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಪಕ್ಷ ಸೇರಲು ಕಾಂಗ್ರೆಸ್‍ನ ಇನ್ನೂ ಕೆಲವು ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಸಂಸದ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಯಿಸಲು ಆಗುವುದಿಲ್ಲ. ಅವನು ನಾರ್ಮಲ್ ಆಗಿ ಇರ್ತಾನೋ ಇಲ್ವೋ ಎಂದು ವಾಗ್ದಾಳಿ ನಡೆಸಿದರು.