ಬಿಲ್ಕಿಸ್ ಬಾನೊ ಪ್ರಕರಣ – ಅರ್ಜಿ ವಿಚಾರಣೆಗೆ ವಿಶೇಷ ಪೀಠ ರಚಿಸಲು ಸುಪ್ರೀಂ ಒಪ್ಪಿಗೆ…

13
firstsuddi

ನವದೆಹಲಿ : 2002 ರಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮನವಿ ಸಲ್ಲಿಸಲಾಗಿದ್ದು, ವಿಚಾರಣೆಗೆ ಹೊಸ ಪೀಠ ರಚಿಸಲು ಸುಪ್ರೀಂಕೋರ್ಟ್ ಇಂದು ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರ ಪೀಠವು ಬಿಲ್ಕಿಸ್ ಬಾನೊ ಅವರ ವಕೀಲೆ ಶೋಭಾ ಗುಪ್ತ ಅವರಿಗೆ ಹೊಸ ಪೀಠವನ್ನು ರಚಿಸುವುದಾಗಿ ಭರವಸೆ ನೀಡಿದೆ.

ಬಿಲ್ಕಿಸ್ ಬಾನೊ ಪರ ವಕೀಲರಾದ ಶೋಭಾ ಗುಪ್ತಾ ಅವರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಇದಕ್ಕಾಗಿ ಪ್ರತ್ಯೇಕ ಪೀಠ ರಚನೆ ಮಾಡಲಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ.

2022ರ ಆಗಸ್ಟ್ 15ರಂದು ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಬಿಲ್ಕಿಸ್ ಬಾನೊ ಅರ್ಜಿ ಸಲ್ಲಿಸಿದ್ದರು.