ಬೆಳಗಾವಿ : ಪ್ರೇಮಿಗಳ ದಿನದಂದೇ ನೇಣಿಗೆ ಶರಣಾದ ಯುವಪ್ರೇಮಿಗಳು!

157
First Suddi

ಬೆಳಗಾವಿ : ಪ್ರೇಮಿಗಳ ದಿನದಂದೇ ಇಬ್ಬರೂ ಯುವಪ್ರೇಮಿಗಳು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಆಸೀಫ್ ಜವಳಿ(21) ಹಾಗೂ ಮಾಸಾಬಿ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳೆಂದು ಗುರುತಿಸಲಾಗಿದೆ.
ಇಬ್ಬರೂ ಕೂಡ ಹಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದರು. ಆದರೆ ಮಾಸಾಬಿ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಇದರಿಂದ ಮನನೊಂದ ಆಸೀಫ್-ಮಾಸಾಬಿ ಪ್ರೇಮಿಗಳ ದಿನದಂದೇ ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.