ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ – ಏಕಕಾಲಕ್ಕೆ ರಾಜ್ಯದ ಹಲವು ಕಡೆ ಎಸಿಬಿ ದಾಳಿ…

86
firstsuddi

ಬೆಂಗಳೂರು : ಇಂದು ಬೆಳ್ಳಂಬೆಳ್ಳಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಎಸಿಬಿ ದಾಳಿ ನಡೆಸಿದೆ.

18 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 78 ಸ್ಥಳಗಳಲ್ಲಿ, ಏಕಕಾಲಕ್ಕೆ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದ್ದು, ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪ ಹಿನ್ನೆಲೆ ಎಸಿಬಿ ರೇಡ್ ಮಾಡಿದೆ.

ದಾಳಿಗೆ ಒಳಗಾದ 18 ಅಧಿಕಾರಿಗಳ ವಿವರ..
• ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತರು, ರಸ್ತೆ ಹಾಗೂ ಸಾರಿಗೆ ಸುರಕ್ಷತೆ, ಬೆಂಗಳೂರು

• ರಾಕೇಶ್ ಕುಮಾರ್, ಬಿಡಿಎ, ನಗರ ಯೋಜನೆ

• ಬಸವರಾಜ ಶೇಖರ್ ರೆಡ್ಡಿ ಪಾಟೀಲ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೌಜಲಗಿ ವಿಭಾಗ, ಗೋಕಾಕ್

• ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್ ಜಿಲ್ಲಾಧಿಕಾರಿ ಕಚೇರಿ, ಗದಗ

• ಗೋಪಿನಾಥ್ ಎನ್.ಮಲಗ, ಯೋಜನಾ ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ, ವಿಜಯಪುರ

• ಬಿ.ಕೆ.ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ, ಬೆಂಗಳೂರು

• ರಮೇಶದ ಕಣಕಟ್ಟೆ, ಆರ್ ಎಫ್ಐ, ಅರಣ್ಯ ಇಲಾಖೆ, ಯಾದಗಿರಿ

• ಶಿವಾನಂದ ಪಿ.ಶರಣಪ್ಪ, ಆರ್ ಎಫ್ಓ, ಬಾದಾಮಿ

• ಮಂಜುನಾಥ್, ಅಸ್ಟಿಸೆಂಟ್ ಕಮೀಷನರ್, ರಾಮನಗರ

• ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲಾಣ್ಯ ಇಲಾಖೆ,

• ಮಹೇಶ್ವರಪ್ಪ, ಪರಿಸರ ಅಧಿಕಾರಿ, ದಾವಣಗೆರೆ

• ಗವಿರಂಗಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು

• ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣಭಾಗ್ಯ ಜಲನಿಗಮ, ದೇವದುರ್ಗ, ರಾಯಚೂರು

• ದಯಾಸುಂದರ್ ರಾಜ, ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ

• ಕೃಷ್ಣನ್, ಎಇ, ಎಪಿಎಂಸಿ, ಹಾವೇರಿ

• ಚೆಲುವರಾಜ್, ಅಬಕಾರಿ ಇನ್ ಸ್ಪೆಕ್ಟರ್, ಗುಂಡ್ಲುಪೇಟೆ

• ಗಿರೀಶ್, ಅಸ್ಟಿಸೆಂಟ್ ಇಂಜಿನಿಯರ್, ನ್ಯಾಷನಲ್ ಹೈವೈ ಸಬ್ ಡಿವಿಷನ್

• ಎಚ್.ಎನ್.ಬಾಲಕೃಷ್ಣ, ಪೊಲೀಸ್ ಇನ್ ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು