ಉಡುಪಿ: ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತನಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ಉಡುಪಿ ನಗರದಲ್ಲಿ ಶನಿವಾರ ಸಂಜೆ ನಡೆದಿದೆ.
ರೆಸಾರ್ಟ್ ಮಾಲಕರೋರ್ವರಿಗೆ ತಾನು ಪತ್ರಕರ್ತನೆಂದು ಹೇಳಿಕೊಂಡು ಐವತ್ತು ಸಾವಿರ ರೂಪಾಯಿ ಲಂಚ ಕೇಳಿದ್ದು ಹಣ ನೀಡದೆ ಹೋದರೆ ಪತ್ರಿಕೆಯಲ್ಲಿ ರೆಸಾರ್ಟ್ ಬಗ್ಗೆ ವರದಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ರೆಸಾರ್ಟ್ ಮ್ಹಾಲಿಕ ಶನಿವಾರ ಸಂಜೆ ಹಣ ನೀಡುವುದಾಗಿ ಕರೆಸಿ ಥಳಿಸಿದ್ದು ಈಗ ಥಳಿಸಿದ ವೀಡಿಯೋ ಸಾರ್ವಜನಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಎರಡು ತಂಡಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.










