ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ : ಎಸ್.ಆರ್.ವಿಶ್ವನಾಥ್.

99
firstsuddi

ಬೆಂಗಳೂರು : ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಎಸ್.ಆರ್ ವಿಶ್ವನಾಥ್ ಅವರು ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್, ಕುಳ್ಳ ದೇವರಾಜ್ ಕೊಟ್ಟ ತಪ್ಪೊಪ್ಪಿಗೆ ಪತ್ರದ ಪ್ರತಿ ಮತ್ತು ಪೆನ್ ಡ್ರೈವ್ ಅನ್ನು ಸಾಕ್ಷಿದಾರರ ಮುಂದೆ ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರಾತ್ರಿಯೆಲ್ಲಾ ಕುಳಿತುಕೊಂಡು ಪೆನ್ ಡ್ರೈವ್ ನಲ್ಲಿದ್ದ ಸುಪಾರಿ ವಿಚಾರದ ಮಾತುಕತೆಯನ್ನ ಮಾತ್ರ ಹೈಲೆಟ್ ಮಾಡಿ ಎಡಿಟ್ ಮಾಡಿದೀವಿ. ಪಂಚನಾಮೆಗೂ ಸಹ ಸಹಿಯನ್ನ ತೆಗೆದುಕೊಂಡಿದ್ದಾರೆ. ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕು ಅಂತಾ ಹೇಳಿ ಒಂದಿಷ್ಟು ಮಾಹಿತಿಯನ್ನ ನೀಡಿದ್ದೀನಿ ಎಂದು ಹೇಳಿದ್ದಾರೆ.

ಶ್ರೇಯಸ್ ಹೋಟೆಲ್ ನಲ್ಲಿ ಮೂರು ಜನ ಇದ್ರು ಅಂತ ಗೊತ್ತಾಯ್ತು. ಹೊರಗಡೆ ನಾಲ್ಕೈದು ಜನ ಇದ್ದಾರೆ ಅಂತ ಗೊತ್ತಾಗ್ತಿದೆ. ಕುಳ್ಳ ದೇವರಾಜ್ ಸುಳ್ಳು ಹೇಳೋದ್ರಲ್ಲ ನಿಸ್ಸೀಮ. ಬಹಳ ದಿನದಿಂದ ಇದೆಲ್ಲಾ ನಡೀತಿದೆ. ನಾನು ಕೂಡಾ ಅಸಡ್ಡೆ ಮಾಡಿದೆ ಅನಿಸುತ್ತದೆ. ಆಡಿಯೋ ಕೇಳಿದ ಮೇಲೆಯೇ ಗೊತ್ತಾಗಿದ್ದು, ಏನೂ ಗೊತ್ತಿಲ್ಲದೇ ದೂರು ಕೊಡಲು ಸಾಧ್ಯವಿಲ್ಲ. ಮೊನ್ನೆ ರಾತ್ರಿ ವಿಡಿಯೋ ಸಿಕ್ಕಿದೆ. ಈ ವಿಚಾರವಾಗಿ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕೆಂದು ಹೇಳಿದ್ದೇನೆ. ಮುಂದೆ ವಿಚಾರಣೆಗೆ ಕರೆದಾಗ ಬರಬೇಕೆಂದು ಸೂಚಿಸಿದ್ದಾರೆ. ಮತ್ತೆ ವಿಚಾರಣೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.