ಬೆಂಗಳೂರು : ವಿಧವೆಯೊಂದಿಗೆ ವಿವಾಹವಾಗುವುದಾಗಿ ನಂಬಿಸಿ ಒಂದು ವರ್ಷದಿಂದ ದೈಹಿಕ ಸಂಬಂಧ ಬೆಳೆಸಿ ಹಣ ಹಾಗೂ ಚಿನ್ನಾಭರಣನ್ನು ಪಡೆದು ಶಿಕ್ಷಕನೊಬ್ಬ ವಂಚಿಸಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದು, ನಂತರ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅವಳಲ್ಲಿದ್ದ ಹಣ ಹಾಗೂ ಚಿನ್ನವನ್ನು ಪಡೆದು ವಂಚಿಸಿದ್ದು, ವಿಧವೆ ನನಗೆ ಹಣದ ಅವಶ್ಯಕತೆ ಇದೆ ವಾಪಸ್ ಕೊಡು ಎಂದು ಕೇಳಿದಾಗ ಮಹಿಳೆ ಮತ್ತು ಶಿಕ್ಷಕ ಇದ್ದ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬೆದರಿಕೆ ಹಾಕಿದ್ದು, ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂದಿಸಿ ಕ್ರಮಕೈಗೊಂಡಿದ್ದಾರೆ.










