ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿ ವಜಾ…

203
firstsuddi

ಬೆಂಗಳೂರು : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಐಟಿ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿದ್ದ ದಾಖಲೆಯಿಲ್ಲದ ಹಣಕ್ಕೆ ಸಂಬಂದಿಸಿದಂತೆ ಇಡಿ ಅಧಿಕಾರಿಗಳು ಜಾರಿ ಮಾಡಿದ್ದ ಸಮ್ಮನ್ಸ್‍ಗೆ ಮಧ್ಯಂತರ ರಕ್ಷಣೆಗೆ ಅವಕಾಶ ನೀಡುವಂತೆ ಡಿ.ಕೆ. ಶಿವಕುಮಾರ್ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಇದರಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆ ಎದುರಾಗಿದೆ. ತಮ್ಮ ಮಧ್ಯಂತರ ಅರ್ಜಿ ತುರ್ತು ವಿಚಾರಣೆ ನಡಸುವಂತೆ ಡಿ.ಕೆ.ಶಿವಕುಮಾರ್ ಅವರ ಪರ ವಕೀಲರು ಬಿ.ವಿ. ಆಚಾರ್ಯ ಅವರು ವಾದ ಮಂಡಿಸಿದ್ದರು. ಈ ವೇಳೆ ಹೈ ಕೋರ್ಟ್ ಡಿ.ಕೆ.ಶಿವಕುಮಾರ್ ಅವರು ನಾಳೆ ಇಡಿ ವಿಚಾರಣೆಗೆ ಹಾಜರಾಗುತ್ತಾರಾ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಇಲ್ಲ ಸೆಪ್ಟೆಂಬರ್ 4 ಅಥವಾ 6ರಂದು ಹಾಜರಾಗುತ್ತಾರೆ. ಅಲ್ಲಿಯವರೆಗೆ ಬಂಧಿಸದಂತೆ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆ ಮುಂದುವರಿಸಬೇಕೆಂದು ವಾದ ಮಂಡಿಸಿದ್ದರು. ಈ ವೇಳೆ ಇಡಿ ಪರ ವಕೀಲರಾದ ಎಂ.ಬಿ. ನರಗುಂದೆ ಅವರು ಯಾವುದೇ ಕಾರಣಕ್ಕೂ ಮಧ್ಯಂತರ ರಕ್ಷಣೆ ಕೊಡಬಾರದು ಎಂದು ವಾದ ಮಂಡಿಸಿದರು. ಹೀಗೆ ವಾದ ಪ್ರತಿವಾದವನ್ನು ಗಮನಿಸಿದ ಹೈಕೋರ್ಟ್ ಸಮ್ಮನ್ಸ್ ಜಾರಿ ಮಾಡಿದ ವಿಷಯಕ್ಕೆ ನಿನ್ನೆಯೇ ತೀರ್ಪು ನೀಡಲಾಗಿದೆ. ಈಗಾ ಯಾವುದೇ ಕಾರಣಕ್ಕೂ ತೀರ್ಪನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ.