ನಾಡಧ್ವಜದ ಬಗ್ಗೆ ಸಚಿವ ಸಿ.ಟಿ. ರವಿ ವಿವಾಧಾತ್ಮಕ ಹೇಳಿಕೆ, ಕನ್ನಡಾಭಿಮಾನಿಗಳ ಆಕ್ರೋಶ…

201
firstsuddi

ಬೆಂಗಳೂರು : ಪ್ರವಾಸೋಧ್ಯಮ, ಕನ್ನಡ ಹಾಗೂ ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ನಾಡಧ್ವಜದ ಬಗ್ಗೆ ವಿವಾಧಾತ್ಮಕ ಹೇಳಿಕೆ ನೀಡಿದ್ದು, ಕನ್ನಡ ಪರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವಜ ಸಂಹಿತೆಯ ಪ್ರಕಾರ ದೇಶಕ್ಕೆ ಇರುವುದು ಒಂದೇ ಧ್ವಜ, ಅದು ತ್ರಿವರ್ಣ ಧ್ವಜ. ಪ್ರತ್ಯೇಕವಾಗಿ ರಾಜ್ಯಕ್ಕೆ ನಾಡಧ್ವಜ ಅಗತ್ಯವಿಲ್ಲ ಎಂದು ಹೇಳಿದ್ದರು. ಸಿ.ಟಿ. ರವಿ ಅವರ ಈ ಹೇಳಿಕೆಗೆ ಕನ್ನಡ ಪರ ಸಂಘಟನೆ ಹಾಗೂ ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಹುತ್ವದ ಸಂಸ್ಕೃತಿಯಾಗಿದೆ. ದೇಶದ ಎಲ್ಲಾ ಜನತೆಗೂ ದೇಶಾಭಿಮಾನವಿದೆ. ಆದರೆ ಏಕಭಾಷೆಯನ್ನು ಹೇರಲು ಹೊರಟಿರುವ ಬಿಜೆಪಿ ನಮ್ಮತನವನ್ನು ಕೊಲ್ಲಲು ಹೋರಟಿದೆ ಎಂದು ಕಿಡಿಕಾರಿದ್ದಾರೆ.