ಮನೆಯಿಂದ ಮಂಗಳೂರಿಗೆ ತೆರಳಿದ ಕೊಣಾಜೆಯ ಯುವತಿ ನಾಪತ್ತೆ…

284
firstsuddi

ಮಂಗಳೂರು: ಮಂಗಳೂರಿಗೆಂದು ಮನೆಯಿಂದ ಹೋದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಅಕ್ಟೋಬರ್ 08 ರಂದು ಕೊಣಾಜೆಯಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಪ್ರಾನ್ಸಿಸ್ ಕುಟಿನ್ಹೋ ಎಂಬವರ ಪುತ್ರಿ ಫಿಯೋನಾ ಸ್ವೀಡಲ್ ಕುಟಿನ್ಹೋ(16) ಎಂದು ಗುರುತಿಸಲಾಗಿದೆ. ಈಕೆ ಅಕ್ಟೋಬರ್ 08 ರಂದು ಮನೆಯಿಂದ ತೆರಳಿದ್ದು, ಈವರೆಗೆ ಹಿಂತಿರುಗಿಲ್ಲ ಎನ್ನಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಎತ್ತರ-4 ಅಡಿ 5 ಇಂಚು, ಗೋಧಿ ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು, ಮಾತಾನಾಡುವ ಭಾಷೆ-ಕನ್ನಡ, ತುಳು, ಕೊಂಕಣಿ, ಇಂಗ್ಲೀಷ್. ಕಾಣೆಯಾದ ಬಾಲಕಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕೊಣಾಜೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0824-2220536, 9480802350, 0824-2220800 ಇವರನ್ನು ಸಂಪರ್ಕಿಸಲು ಠಾಣಾಧಿಕಾರಿ ಕೊಣಾಜೆ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.