ಮಹಿಂದಾ ರಾಜಪಕ್ಸೆ ಭಾರತಕ್ಕೆ ಪಲಾಯನ ಮಾಡಿದ ವಿಚಾರ ತಳ್ಳಿಹಾಕಿದ ರಾಯಭಾರಿ ಕಚೇರಿ.

47
firstsuddi

ನವದೆಹಲಿ : ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಅವರ ಕುಟುಂಬದ ಸದಸ್ಯರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಸುದ್ದಿಯನ್ನು ಭಾರತೀಯ ರಾಯಭಾರಿ ಕಚೇರಿ ನಿರಾಕರಿಸಿದೆ.

ಶ್ರೀಲಂಕಾದ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಸಂಪೂರ್ಣ ಬೆಂಬಲವನ್ನು ಹೊಂದಿದೆ. ಆದರೆ ಸೈನ್ಯವನ್ನು ನವದೆಹಲಿಯಿಂದ ಕೊಲಂಬೊಗೆ ಕಳುಹಿಸಿಲ್ಲ. ಈ ಎಲ್ಲಾ ಊಹಾಪೋಹಗಳು ಸುಳ್ಳು ಮತ್ತು ನಕಲಿಯದ್ದಾಗಿದೆ ಎಂದು ಹೇಳಿದೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಭಣಗೊಂಡಿರುವ ಪರಿಣಾಮ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ಸೋಮವಾರ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಮಹಿಂದಾ ರಾಜಪಕ್ಸೆ ಎಲ್ಲಿದ್ದಾರೆ ಎಂದು ಪ್ರಶ್ನೆ ಕಾಡಿತ್ತು. ಮಹಿಂದಾ ಅವರು ತಮ್ಮ ಕಚೇರಿ ಹಾಗೂ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ತೊರೆದಿದ್ದಾರೆ ಎಂದು ವರದಿಯಾಗಿತ್ತು.

ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ
ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುವುದು ಅಥವಾ ಇತರರಿಗೆ ಹಾನಿ ಮಾಡುವುದು ಕಂಡುಬಂದರೆ ಅಂತಹವರನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ರಕ್ಷಣಾ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಆಡಳಿತ ಪಕ್ಷದ ರಾಜಕಾರಣಿಗಳ ಒಡೆತನದ ಹಲವಾರು ಮನೆಗಳನ್ನು ಹಾನಿಗೊಳಿಸಲಾಗಿದೆ. ಬೆಂಕಿ ಹಚ್ಚಿ ನಾಶಗೊಳಿಸಲಾಗಿದೆ. ಸರ್ಕಾರದ ಬೆಂಬಲಿಗರ ಮೇಲೆ ಕಳೆದ ಎರಡು ದಿನಗಳಿಂದ ದಾಳಿ ಮಾಡಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ.