ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ ಉದ್ಯಮಿ ಸಲೀಂ ಖುರೇಶಿ ಬಂಧನ…

739
firstsuddi

ಮುಂಬೈ : ಕಾಮುಕ ಉದ್ಯಮಿಯೋರ್ವ ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿರುವ ಘಟನೆ ಮಹಾರಾಷ್ಟ್ರದ ಬಾಂದ್ರಾದಲ್ಲಿ ನಡೆದಿದೆ. ಸಲೀಂ ಖುರೇಶಿ(60) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಬಾಂದ್ರಾದಲ್ಲಿ ಇದ್ದ ತನ್ನ ಮನೆಯ ಕೆಲಸಕ್ಕೆ ಇದ್ದ 25 ವರ್ಷದ ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ್ದು, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಬಾಂದ್ರಾ ಪೊಲೀಸರು ಸೋಮವಾರ ಸಲೀಂ ನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಬಗ್ಗೆ ಪ್ರತಿಕ್ರಯಿಸಿದ ಪೊಲೀಸರು, ಮಹಿಳೆ 2ತಿಂಗಳಿಂದ ಸಲೀಂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಮನೆಯಲ್ಲೇ ವಾಸಿಸುತ್ತಿದ್ದಳು. ಕಳೆದ ಶನಿವಾರ ತಡರಾತ್ರಿ ಕೋಣೆಯಲ್ಲಿ ಮಲಗಿದ್ದ ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ್ದಾನೆ. ಈ ಘಟನೆಯಿಂದ ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಮಹಿಳೆ ಮೂರ್ಛೆ ಹೋಗಿದ್ದು, ಇದನ್ನು ಕಂಡ ಸಲೀಂ ತಾನೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯನ್ನು ವೈದ್ಯರು ಚಿಕಿತ್ಸೆ ನೀಡಿ ಪ್ರಶ್ನಿಸಿದಾಗ ಮಹಿಳೆ ಈ ಘಟನೆ ಬಗ್ಗೆ ವಿವರಿಸಿದ್ದು, ಕೂಡಲೇ ವೈದ್ಯರು ಬಾಂದ್ರಾ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಲೀಂನನ್ನು ಬಂಧಿಸಿದ್ದಾರೆ.