ಬೆಳಗಾವಿ: ಮಹಾಂತೇಶ ನಗರದಲ್ಲಿ ನಡೆದ ಗುಂಡಿನ ದಾಳಿ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಿದ್ದೇವೆ. ಗಾಯಾಳು ಯುವಕ ಪ್ರಣೀತ್ ಮತ್ತು ಆತನ ಸ್ನೇಹಿತೆಯ ಕಡೆಯಿಂದ ಎರಡು ಕೇಸ್ ದಾಖಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ. ಪ್ರಣೀತ್ ತನ್ನ ಹಳೆಯ ಪ್ರಿಯತಮೆಯ ಮನೆಗೆ ಊಟಕ್ಕೆ ಹೋಗಿದ್ದ. ಈ ವೇಳೆ ಪ್ರೀತಿಯಲ್ಲಿ ತೊಂದರೆ ಆಗಿದೆ ಅಂತಾ ಹೇಳಿದ್ದಾನೆ. ಆಗ ಆಕೆ ಪ್ರಣೀತ್‍ನ ಪ್ರಿಯತಮೆಗೆ ಕರೆ ಮಾಡಿ ಆಕೆಯನ್ನೂ ಮನೆಗೆ ಕರೆಸಿಕೊಂಡಿದ್ದಾಳೆ. ಆಕೆ ತನ್ನ ಸಹೋದರರ ಜೊತೆಗೆ ಬಂದಿದ್ದಳು. ಈ ವೇಳೆ ಗುಂಡು ಹಾರಿಸಿ ಗಲಾಟೆ ಮಾಡಿ ಎಸ್ಕೇಪ್ ಆಗಿದ್ದಾರೆ” ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ. ಪ್ರಣೀತ್ ಪ್ರಿಯತಮೆ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಪ್ರೀತಿ ವಿಚಾರಕ್ಕೆ ಗಲಾಟೆ ಆಗಿರುವ ಮಾಹಿತಿ ಇದೆ” ಎಂದು ಅವರು ಮಾಹಿತಿ ನೀಡಿದರು.