ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ ಕ್ರಮ ಕೈಗೊಳ್ಳಿ ಎಂದು ಅರ್ಜಿ ; ರಿಮೋಟ್ ವೀಕ್ಷಕರ ಕೈಯಲ್ಲೇ ಇರುತ್ತೆ ಎಂದ ಹೈಕೋರ್ಟ್!

230
firstsuddi

ಬೆಂಗಳೂರು : ಮಾಧ್ಯಮಗಳು ಕೋವಿಡ್ ಸೋಂಕಿತ ರೋಗಿಗಳು ನರಳಾಡಿ ಸಾವನ್ನಪ್ಪುವ ದೃಶ್ಯದಿಂದ ಹಿಡಿದು ಚಿತಾಗಾರಗಳಲ್ಲಿ ಸಾಮೂಹಿತ ಅಂತ್ಯಸಂಸ್ಕಾರದ ದೃಶ್ಯ ಭೀಕರವೆನ್ನಿಸುವಂತೆ ತೋರಿಸುತ್ತಿವೆ. ಸೋಂಕಿತರಿಗೂ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿವೆ.ಜನರಲ್ಲಿ ಕೋವಿಡ್ ಕುರಿತಂತೆ ಜೀವ ಭಯ ಹುಟ್ಟಿಸುತ್ತಿರುವ ಮಾಧ್ಯಮಗಳ ವರದಿಗಳಿಗೆ ನಿರ್ಬಂಧಿಸುವಂತೆ ಕೋರಿ ಲೆಟ್ ಕಿಟ್ಸ್ ಫೌಂಡೇಶನ್ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಅರ್ಜಿದಾರರರಿಗೆ ಸೂಚನೆ ನೀಡಿದ್ದು, ವೀಕ್ಷಕರ ಕೈಯಲ್ಲೇ ರಿಮೋಟ್ ಇರುತ್ತದೆ, ಅದಕ್ಕಿಂತ ಉತ್ತಮವಾದುದನ್ನು ವೀಕ್ಷಿಸಲು ಚಾನೆಲ್ ಬದಲಾಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅರ್ಜಿಯನ್ನು ಇತ್ಯರ್ಥಪಡಿಸಿದೆ.