ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ ಸಿದ್ದರಾಮಯ್ಯ ಬೇಕು: ಸಚಿವ ಸತೀಶ್ ಜಾರಕಿಹೊಳಿ.

13

ಬೆಂಗಳೂರು: ಸಿದ್ದರಾಮಯ್ಯ ಅವರು ನಮಗೆ ಬೇಕೆ ಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದರೆ ಸಿದ್ದರಾಮಯ್ಯ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವ್ರು ನಮಗೆ ಬೇಕೆ ಬೇಕು. ಹಿಂದೆಯೂ ಇದನ್ನ ಹೇಳಿದ್ದೆ, ಈಗಲೂ ಹೇಳುತ್ತೇನೆ. ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿಯಾದರೂ ಅವರು ಬೇಕು. ಮುಂದಿನ ನಾಯಕತ್ವ ಬೆಳೆಸೋವರೆಗೂ ರಾಜಕಾರಣದಲ್ಲಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದು ತಿಳಿಸಿದರು. ನಮ್ಮ ಆಶಯ ಕೂಡ ಅದೇ ಇದೆ. ಚುನಾವಣೆಯಿಂದ ನಿವೃತ್ತಿ ಆದರೂ, ಸಕ್ರಿಯ ರಾಜಕೀಯದಲ್ಲಿ ಸಿದ್ದರಾಮಯ್ಯ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ, ಸಿದ್ದರಾಮಯ್ಯ ಬೇಕು. ಚುನಾವಣೆ ಗೆಲ್ಲಲು ಅನಕೂಲ ಆಗುತ್ತೆ. ಇನ್ನೊಂದು ಅವಧಿಯ ವರೆಗೆ ರಾಜಕೀಯದಲ್ಲಿ ಅವರು ಇರಬೇಕು ಎಂದು ಒತ್ತಾಯಿಸಿದರು.