ಮುಖ್ಯಂಮತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ…

179
firstsuddi

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಲೇ ಇದ್ದು, ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಈ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದು, ಗೋಪಾಲಯ್ಯ, ರಮೇಶ್ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿಯನ್ನು ನೀಡಿಲ್ಲ. ಹೀಗಾಗಿ ಇವರಿಗೆ ಉಸ್ತುವಾರಿಯನ್ನು ವಹಿಸದೇ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಬಿ.ಎಸ್ ಯಡಿಯೂರಪ್ಪ-ಬೆಂಗಳೂರು ನಗರ, ಲಕ್ಮಣ ಸವದಿ-ರಾಯಚೂರು, ಸಿ.ಎಸ್. ಅಶ್ವತ್ಥ ನಾರಾಯಣ-ರಾಮನಗರ, ಗೋವಿಂದ ಕಾರಜೋಳ-ಬಾಗಲಕೋಟೆ, ಆರ್.ಅಶೋಕ್-ಬೆಂಗಳೂರು ಗ್ರಾಮಾಂತರ, ಕೆ.ಎಸ್. ಈಶ್ವರಪ್ಪ-ಶಿವಮೊಗ್ಗ, ಜಗದೀಶ್ ಶೆಟ್ಟರ್-ಬೆಳಗಾವಿ, ಧಾರವಾಡ(ಹೆಚ್ಚುವರಿ), ಬಿ.ಸಿ. ಪಾಟೀಲ್-ಕೊಪ್ಪಳ, ಬಿ.ಶ್ರೀರಾಮುಲು – ಚಿತ್ರದುರ್ಗ, ವಿ.ಸೋಮಣ್ಣ-ಕೊಡಗು, ಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿ (ಹೆಚ್ಚುವರಿ), ಎಸ್.ಸುರೇಶ್ ಕುಮಾರ್-ಚಾಮರಾಜನಗರ, ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ (ಹೆಚ್ಚುವರಿ), ಸಿ.ಟಿ.ರವಿ- ಚಿಕ್ಕಮಗಳೂರು, ಕೆ.ಸುಧಾಕರ್-ಚಿಕ್ಕಬಳ್ಳಾಪುರ, ಕೋಟಾ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ, ಸಿ.ಸಿ. ಪಾಟೀಲ- ಗದಗ, ಎಚ್.ನಾಗೇಶ್-ಕೋಲಾರ, ಬೈರತಿ ಬಸವರಾಜ-ದಾವಣಗೆರೆ, ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ ಪ್ರಭುಚವ್ಹಾಣ-ಬೀದರ್,ಯಾದಗಿರಿ(ಹೆಚ್ಚುವರಿ), ಆನಂದಸಿಂಗ್-ಬಳ್ಳಾರಿ, ಎಸ್.ಟಿ.ಸೋಮಶೇಖರ್- ಮೈಸೂರು, ಕೆ.ಸಿ.ನಾರಾಯಣಗೌಡ- ಮಂಡ್ಯ, ಶಶಿಕಲಾ ಜೊಲ್ಲೆ- ವಿಜಯಪುರ