ಮೂಡಿಗೆರೆಯಲ್ಲಿ ಗನ್ ತೋರಿಸಿ ವಾಹನ ಅಡ್ಡಹಾಕುತ್ತಿದ್ದ ನಾಲ್ವರು ದರೋಡೆಕೋರರ ಬಂಧನ…

266
firstsuddi

ಮೂಡಿಗೆರೆ : ಮೂಡಿಗೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೆದ್ದಾರಿಯಲ್ಲಿ ಗನ್ ತೋರಿಸಿ ವಾಹನಗಳನ್ನು ಅಡ್ಡ ಹಾಕುತ್ತಿದ್ದ ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಡಿಗೆರೆ ತಾಲ್ಲೂಕು ಮುದ್ರೆ ಮನೆ ಬಸ್ ನಿಲ್ದಾಣದ ಹತ್ತಿರ ದರೋಡೆಗೆ ಸಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 2 ರಿವಾಲ್ವರ್, 30 ಬುಲೆಟ್ಸ್, ಡ್ರ್ಯಾಗನ್, ಬೈಕ್ ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಜಾರ್ಖಂಡ್ ಮೂಲದ ಅಜಯ್ ಸಿಂಗ್, ಮಂಡ್ಯದ ಶಿವಕುಮಾರ್, ಹಾಸನದ ಕುಮಾರಸ್ವಾಮಿ, ಮೂಡಿಗೆರೆಯ ಶಿವಕುಮಾರ್ ಎಂದು ಗುರುತಿಸಲಾಗಿದೆ.

ಈ ಗ್ಯಾಂಗ್ ಉತ್ತರ ಪ್ರದೇಶದಿಂದ ರಿವಾಲ್ವರ್ ಖರೀದಿಸಿದ್ದು, ಜೂಜಾಟದ ಅಡ್ಡೆಗಳೇ ಇವರ ಟಾರ್ಗೆಟ್ ಆಗಿದ್ದವು. ಜೂಜಾಟದ ಸ್ಥಳಗಳಿಗೆ ಹೋಗಿ, ಗಾಳಿಯಲ್ಲಿ ಗುಂಡು ಹಾರಿಸಿ ಹಣ ದೋಚುತ್ತಿದ್ದರು. ಅಲ್ಲದೇ ಗ್ಯಾಂಗ್ ವಾರ್ ನಡೆಸುವುದಕ್ಕೂ ಈ ತಂಡ ಸ್ಕೆಚ್ ಹಾಕಿತ್ತು. ಇನ್ನೂ ಕೆಲವು ದಿನಗಳ ಹಿಂದೆ ಹಾಸನದ ಯಾಚನಹಳ್ಳಿ ಚೇತನ್ ಮೇಲೆ ಫೈರ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ.

ಇನ್ನೂ ಕಾರ್ಯಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಡಿಜಿ, ಐಜಿಪಿ, ಪ್ರವೀಣ್ ಸೂದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, 1 ಲಕ್ಷ ಬಹುಮಾನ ನೀಡಿ ಗೌರವಿಸಿದ್ದಾರೆ.