ಕೊಟ್ಟಿಗೆಹಾರ : ಅಕ್ರಮವಾಗಿ ಹಿಂಸಾತ್ಮಕವಾಗಿ ವಾಹನದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಬಣಕಲ್ ಪೋಲಿಸರು ಬಂಧಿಸಿದ್ದಾರೆ.
ಇಂದು ಬೆಳಗ್ಗಿನ ಜಾವ 4-30 ರ ಸುಮಾರಿಗೆ ಬೆಳಗೊಡು ಗ್ರಾಮದ ಕುಂಡ್ರ ಕಡೆಯಿಂದ ಕಾರು ಹಾಗೂ ಗೂಡ್ಸ್ ವಾಹನ ವೇಗವಾಗಿ ಬಂದಿದ್ದು ಪೋಲಿಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಕಾರು ಮತ್ತು ಗೂಡ್ಸ್ ವಾಹನದಲ್ಲಿದ್ದವರು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದ್ದಾರೆ. ಪೋಲಿಸ್ ಸಿಬ್ಬಂದಿ ಸುತ್ತುವರಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಅರೇಹಳ್ಳಿಯ ವಾಸೀಮ್ ಪಾಷ, ಫಲ್ಗುಣಿಯ ಅರುಣಕುಮಾರ್, ಬೆಳಗೋಡು ಸಮೀಪದ ಕುಂಡ್ರ ಗ್ರಾಮದ ಸತೀಶ್, ಹಾಗು ಸುನಿಲ್ ಬಂಧಿತ ಆರೋಪಿಗಳು. ಅರೇಹಳ್ಳಿಯ ಮುಶೀರ್ ಅಹಮದ್, ಸೈಪುಲ್ಲಾ ಪರಾರಿಯಾದ ಆರೋಪಿಗಳಾಗಿದ್ದು ಪೋಲಿಸರು ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬಾನಳ್ಳಿ ಗ್ರಾಮದ ಕನ್ನೆಗೆರೆ ಎಸ್ಟೇಟ್ಗೆ ಹೋಗುವ ರಸ್ತೆಯ ಬದಿಯಲ್ಲಿ ಮಲಗಿದ್ದ ಬಿಡಾಡಿ ದನಗಳನ್ನು ತುಂಬಿಸಿಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಆರೋಪಿಗಳು ಸಾಗಿಸುತ್ತಿದ್ದ ನಾಲ್ಕು ಜಾನುವಾರುಗಳನ್ನು ಪೋಲಿಸರು ರಕ್ಷಿಸಿದ್ದಾರೆ. ಗೋಸಾಗಾಟಕ್ಕೆ ಬಳಸಿದ ಕಾರು ಹಾಗೂ ಗೂಡ್ಸ್ ವಾಹನವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಬಣಕಲï ಠಾಣೆ ಪಿಎಸ್ಐ ಶ್ರೀನಾಥ್ ರೆಡ್ಡಿ, ಸಿಬ್ಬಂದಿಗಳಾದ ಬಾಬು, ಮೆಹಬೂಬು ಸಾದನಿ, ಸಚಿನ್, ರಾಜೇಂದ್ರ ಮುಂತಾದವರು ಇದ್ದರು.










