ಮೂಡಿಗೆರೆ: ಇಂದು ಪಟ್ಟಣದ ಹಿರೇ ದೇವಿರಮ್ಮನವರ ಬನದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವರ ಪೂಜೆಯ ಸಲುವಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 7ಗಂಟೆಗೆ ಗಣಪತಿ ಹೋಮವನ್ನು ನಡೆಸಿದ ನಂತರ ನಾಗದೇವರಿಗೆ ಆಶ್ಲೇಷ ಬಲಿ, ಶ್ರೀ ಅಯ್ಯಪ್ಪ ಸ್ವಾಮಿ, ಗಣಪತಿ, ಸುಬ್ರಹ್ಮಣ್ಯ ಸ್ವಾಮಿ ಹಾಗೂ ಹಿರೇ ದೇವೀರಮ್ಮನವರಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾ ಪೂಜೆ ನಡೆಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ 7 ಗಂಟೆಗೆ ಶಾಲಾ ಮಕ್ಕಳಿಗೆ ಶಾರದಾ ಮಂಟಪದಲ್ಲಿ ಶಾರದಾ ಪೂಜೆ ಹಾಗೂ 7.30 ಕ್ಕೆ ದೇವಿರಮ್ಮನವರಿಗೆ ರಂಗಪೂಜೆ ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಮಂಚೇಗೌಡ, ಹಾಗೂ ಸಮಿತಿಯ ಇತರ ಸದಸ್ಯರು ಸೇರಿದಂತೆ ಪ್ರಧಾನ ಗುರುಸ್ವಾಮಿಗಳಾದ ಕೆ.ರಮೇಶ್, ಲೋಕೇಶ್, ಮುನಿಸ್ವಾಮಿ, ಐತಪ್ಪ ಹಾಗೂ ಬಿಜೆಪಿ ಮುಖಂಡರಾದ ಹಳೆಕೋಟೆ ಮನೋಜ್, ಮುಗ್ರಹಳ್ಳಿ ಪ್ರಸನ್ನ , ಶಾಲಾ ಕಾಲೇಜು ಮಕ್ಕಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾದರೂ.










