ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘವೂ ಕಸ್ತೂರಿರಂಗನ್ ವರದಿ ವಿರೋಧಿಸಿ ಚುನಾವಣೆ ಬಹಿಷ್ಕರಿಸಲು ಮನವಿ ಮಾಡಿದರೂ ಕೂಡ ಚುನಾವಣಾ ಬಹಿಷ್ಕಾರ ಮಾಡದ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರಸಮಿತಿ ಯುವಜನತಾದಳ ಕಾರ್ಯಾಧ್ಯಕ್ಷ ಆದರ್ಶ್ ಬಾಳೂರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಸ್ತೂರಿರಂಗನ್ ವರದಿಯೂ ನಮ್ಮ ಬಾಳೂರು ಹೋಬಳಿ ಹಾಗೂ ಮಲೆನಾಡು ಭಾಗಗಳಿಗೆ ಮರಣಶಾಸನವಾಗಿದ್ದು ಈ ವರದಿಯೂ ಜಾರಿ ಆಗದಂತೆ ನಮ್ಮ ಪಕ್ಷವೂ ಹಾಗೂ ಮುಖಂಡರುಗಳು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಾಳೂರು ಗ್ರಾ.ಪಂ ಚುನಾವಣೆ ಬಹಿಷ್ಕರಿಸಲು ಸಿದ್ದರಿದ್ದೇವೆ. ಜನಗಳ ಕಷ್ಟಕ್ಕೆ ನಾವು ಮತ್ತು ನಮ್ಮ ಪಕ್ಷ ಸ್ಪಂದಿಸಲು ಸಿದ್ದವಾಗಿದೆ. ರೈತರ ಹಿತ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದರು.
ಚುನಾವಣೆ ಬಹಿಷ್ಕರಿಸುವಂತೆ ತಾಲ್ಲೂಕು ಬೆಳೆಗಾರರ ಸಂಘ ಮನವಿ ಮಾಡಿತ್ತು. ಆದರೆ ಆಡಳಿತಾ ಪಕ್ಷವೂ ಬಿಜೆಪಿ ಚುನಾವಣೆಗೆ ಮುಂದಾಗಿದೆ. ಬಾಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಬೆಂಬಲಿತ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 6 ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಸಿದ್ದರಿದ್ದರು. ಆದರೆ ಬಿಜೆಪಿ ಬೆಂಬಲಿತ 6 ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಬರಲಿಲ್ಲ. ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಚುನಾವಣೆ ಬಹಿಷ್ಕರಿಸುವುದಾಗಿ ಮಾದ್ಯಮಗಳಲ್ಲಿ ಹೇಳಿಕೆ ನೀಡುತ್ತಾರೆ. ಆದರೆ ಅವರದೇ ಪಕ್ಷದ ಅಭ್ಯರ್ಥಿಗಳು ಚುನಾವಣೆಯನನು ಬಹಿಷ್ಕರಿಸದೇ ಚುನಾವಣೆಯಲ್ಲಿ ಸ್ಪರ್ದಿಸಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷ ಈ ದ್ವಂದ್ವ ನೀತಿಗೆ ಮತದಾರರು ತಕ್ಕ ಪಾಠಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.










