ಕೊಟ್ಟಿಗೆಹಾರ ; ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಹೋಟೆಲ್ ವರ್ತಕರು ಸುರಕ್ಷತಾ ಕೈಗೊಂಡು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಆಹಾರ ಸಂರಕ್ಷಣಾಧಿಕಾರಿ ಸುರೇಶ್ ಹೇಳಿದರು.
ಬಣಕಲ್ನ ಹೋಟೆಲ್ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹೋಟೆಲ್ಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು. ಸಾಮಾಜಿಕ ಅಂತ ಕಾಯ್ದುಕೊಂಡು ಗ್ರಾಹಕರಿಗೆ ಸೇವೆ ನೀಡಬೇಕು. ಹೋಟೆಲ್ನಲ್ಲಿ ತಯಾರಿಸುವ ಆಹಾರದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣವನ್ನು ಬಳಸಬಾರದು. ಹೋಟೆಲ್ಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿನೀರು ಕೊಡಬೇಕು. ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕು ಎಂದರು.
ಬಣಕಲ್ ಪಿಡಿಓ ಕೃಷ್ಣಪ್ಪ ಮಾತನಾಡಿ ಬಣಕಲ್ ಹೋಟೆಲ್ ವರ್ತಕರು ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ವ್ಯಾಪಾರ ಪರವಾನಗಿಯನ್ನು ಮಾಡಿಸದ ವರ್ತಕರು ಒಂದು ವಾರದೊಳಗೆ ಮಾಡಿಸಬೇಕು. ಮಾಡಿಸದೆ ಇದ್ದಲ್ಲಿ ಗ್ರಾ.ಪಂ ಅಧ್ಯಕ್ಷ ಸದಸ್ಯರ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ, ಬಣಕಲ್ ಕಸ ವಿಲೇವಾರಿ ವಾಹನದ ಮೂಲಕ ದಿನನಿತ್ಯ ಪಟ್ಟಣದ ಕಸ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿದೆ. ಅಂಗಡಿ ಮುಂಗಟ್ಟುಗಳಿಗೆ ಕಸದ ಬುಟ್ಟಿಗಳನ್ನು ಗ್ರಾ.ಪಂ ವತಿಯಿಂದ ನೀಡಲಾಗಿದ್ದು ವರ್ತಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಚತೆ ಕಾಪಾಡಬೇಕು. ಬಣಕಲ್ ಪಟ್ಟಣದಲ್ಲಿ ಸೊಳ್ಳೆ ಹರಡದಂತೆ ಚರಂಡಿಗಳಿಗೆ ಔóಷಧಿ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಸುಂದರೇಶ್, ಗ್ರಾ.ಪಂ ಸಿಬ್ಬಂದಿಗಳಾದ ಸುದೀರ್, ಹೋಟೆಲ್ ವರ್ತಕರು ಇದ್ದರು.










