ಮೂಡಿಗೆರೆ : ಗಿಡಗಳನ್ನು ಹಿಡಿದು ಶಾಲೆಗೆ ಬಂದ ಮಕ್ಕಳು…

70
firstsuddi

ಕೊಟ್ಟಿಗೆಹಾರ : ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದ ಹಿನ್ನಲೆಯಲ್ಲಿ ಶಾಲೆಯ ಎಲ್ಲಾ ಮಕ್ಕಳು ಗಿಡಗಳನ್ನು ಹಿಡಿದು ಶಾಲೆಗೆ ಆಗಮಿಸಿ ಗಮನ ಸೆಳೆದರು.

ಶಾಲೆಯ ಶಿಕ್ಷಕರ ವರ್ಗ, ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮನದಟ್ಟು ಮಾಡುವ ಉದ್ದೇಶದಿಂದ ಪೋಷಕರು ಮಕ್ಕಳಿಗೆ ಗಿಡಗಳನ್ನು ನೆಟ್ಟು ಬೆಳೆಸಲು ತಿಳಿಸಿದ್ದು ಅದರಂತೆ ಮಕ್ಕಳು ಇಂದು ಬೆಳಗ್ಗೆ ಸಮವಸ್ತ್ರ ತೊಟ್ಟು ಬ್ಯಾಗಿನ ಜೊತೆಗೆ ಗಿಡವನ್ನು ಹಿಡಿದು ಶಾಲೆಗೆ ಆಗಮಿಸಿದ್ದರು.

ಶಾಲೆಯಲ್ಲಿ ಗ್ರೀನ್, ಆರೆಂಜ್, ಪಿಂಕ್, ಯಲ್ಲೋ ಎಂಬ ನಾಲ್ಕು ಗುಂಪುಗಳನ್ನು ಮಾಡಲಾಗಿದ್ದು ಆಯಾ ಗುಂಪುಗಳಿಗೆ ಇಂತಿಷ್ಟು ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿ ನೀಡಲಾಗಿದ್ದು ಮಕ್ಕಳು ಹೂಕುಂಡಗಳಲ್ಲಿ ಗಿಡಗಳನ್ನು ನೆಡುತ್ತಿದ್ದ ದೃಶ್ಯ ಕಂಡು ಬಂತು.

ಈ ಬಗ್ಗೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಮುಖ್ಯ ಶಿಕ್ಷಕ ರಾಜು ಡಿ, ಮಕ್ಕಳ ಪೋಷಕರಿಗೆ ಮನವೊಲಿಸಿ ಅವರೊಂದಿಗೆ ಒಂದೊಂದು ಗಿಡಗಳನ್ನು ಕೊಟ್ಟು ಕಳಿಸಲು ತಿಳಿಸಲಾಗಿತ್ತು. ಮಕ್ಕಳು ತಂದ ಗಿಡಗಳನ್ನು ಸುರಕ್ಷಿತವಾಗಿ ಬೆಳೆಸುವ ನಿಟ್ಟಿನಲ್ಲಿ ಹೂಕುಂಡಗಳನ್ನು ನೀಡಿ ಗಿಡಗಳನ್ನು ಬೆಳೆಸಲು ಮಕ್ಕಳಿಗೆ ಅವಕಾಶ ಮಾಡಿಕೊಡಲಾಯಿತು ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಉಮೇಶ್, ಎಸ್‍ಡಿಎಂಸಿ ಅಧ್ಯಕ್ಷ ಮಹೇಶ್ ಹಾಗೂ ಶಿಕ್ಷಕ ವರ್ಗ, ಪೋಷಕರು ಇದ್ದರು.