ಮೂಡಿಗೆರೆ : ಜ.4 ಕ್ಕೆ ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಾಫಿಕ್ ಸೊಸೈಟಿ ಉದ್ಘಾಟನೆ…

579
firstsuddi

ಮೂಡಿಗೆರೆ : ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಇರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಕಟ್ಟಡದಲ್ಲಿ ಜ.4ರಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಾಫಿಕ್ ಸೊಸೈಟಿ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರಿನ ಸಹಮತ ಸಂಸ್ಥೆಯ ಐವಾನ್ ಡಿಸಿಲ್ವಾ ಅವರು ತಿಳಿಸಿದ್ದಾರೆ.
ಪತ್ರಿಕೆಗೆ ಮಾಹಿತಿ ನೀಡಿದ ಅವರು, ಜ.4ರಂದು ಮಧ್ಯಾಹ್ನ 2 ಗಂಟೆಗೆ ಅಂತರ ರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರು ತೇಜಸ್ವಿ ಫೋಟೋಗ್ರಾಫಿಕ್ ಸೊಸೈಟಿಯನ್ನು ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಛಾಯಗ್ರಾಹಕ ಡಾ.ಕೃಷ್ಣಮೋಹನ್, ಚಿತ್ರ ಕಲಾವಿದ ನೇಮಿರಾಜ್ ಶೆಟ್ಟಿ ಹಾಗೂ ತೇಜಸ್ವಿ ಪ್ರತಿಷ್ಠಾನದ ಸರ್ವಸದಸ್ಯರುಗಳು ಭಾಗವಹಿಸಲಿದ್ದಾರೆ. ಇದೇ ದಿನ ಸಂಜೆ 4 ರಿಂದ 7 ಹಾಗೂ ಭಾನುವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ನೆರಪೀಡಿತ ಪ್ರದೇಸಗಳಾದ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ದುರಂತಗಳು, ಪರಿಸರ, ವನ್ಯ ಜೀವಿಗಳು, ಮನೆ ಹಾಗೂ ಬದುಕು ನಾಶವಾಗಿರುವ, ಸ್ಥಳಾಂತರಗೊಂಡಿರುವ ಗ್ರಾಮಸ್ಥರ ಬದುಕಿನ ಬಗ್ಗೆ ಛಾಯಚಿತ್ರೀಕರಣ ಮತ್ತು ಸ್ಥಳದಲ್ಲಿಯೇ ಚಿತ್ರಗಳನ್ನು ರಚಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜ.4ರ ಸಂಜೆ 7ರಿಂದ 9 ಗಂಟೆವರೆಗೆ ಹಾಗೂ ಜ.5ರ ಬೆಳಗ್ಗೆ 10ರಿಂದ 12 ಗಂಟೆವರೆಗೆ ಛಾಯಾ ಚಿತ್ರಗ್ರಹಣದಲ್ಲಿ ತೆಗೆದ ಫೋಟೋಗಳ ಸಂಕಲನ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಸಕ್ತರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.