ಮೂಡಿಗೆರೆ : ನೈಜ ಜೀವನದಲ್ಲಿ ವಿಶ್ವಾಸದಿಂದ ಬದುಕಿದರೆ ಸುಖ-ಸಂಸಾರವನ್ನು ನಡೆಸಲು ಸಾಧ್ಯವಾಗುತ್ತದೆ : ಅನಿಲ್‍ಲೋಬೊ.

230
First Suddi

ಕೊಟ್ಟಿಗೆಹಾರ : ನೈಜ ಜೀವನದಲ್ಲಿ ವಿಶ್ವಾಸದಿಂದ ಬದುಕಿದರೆ ಸುಖ ಸಂಸಾರವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಹಾಸನದ ಪಾತಿಮಾಪುರ ಚರ್ಚ್‍ನ ಧರ್ಮಗುರು ಅನಿಲ್‍ಲೋಬೊ ಹೇಳಿದರು.
ಬಣಕಲ್ ಬಾಲಿಕಾ ಮರಿಯ ಚರ್ಚಿನ ವಾರ್ಷಿಕೋತ್ಸವದ ಸಂಭ್ರಮಿಕ ಪೂಜೆ ಅರ್ಪಿಸಿ ಮಾತನಾಡಿದರು. ಮಾತೆ ಮರಿಯಮ್ಮನವರು ವಿಶ್ವಾಸದಿಂದ ದೇವರ ಕರೆಯನ್ನು ಸ್ವೀಕರಿಸಿದರು. ಆದ್ದರಿಂದ ಅವರು ಏಸು ಕ್ರಿಸ್ತರ ಮಾತೆಯಾಗಿ ನಮಗೆಲ್ಲರಿಗೂ ಆದರ್ಶ ಮಾತೆಯಾಗಿದ್ದಾರೆ. ಪೋಷಕರು ಮಕ್ಕಳಿಗೆ ವಿಶ್ವಾಸದ ಮೂಲಕ ಸನ್ನಡತೆಯಿಂದ ನಡೆಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು. ತಂದೆ-ತಾಯಂದಿರ ಜವಾಬ್ದಾರಿಯಂತೆ ಶಿಕ್ಷಕರು ಕೂಡ ಜವಾಬ್ದಾರಿಯಿಂದ ಮಕ್ಕಳಿಗೆ ಶಿಕ್ಷಣ ನೀಡಿದರೆ ಮಕ್ಕಳು ಪ್ರಬುಧ್ದರಾಗಬಲ್ಲರು. ಕುಟುಂಬಗಳಲ್ಲಿ ಕಷ್ಟ ನೋವು ಬರುವುದು ಸಹಜ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಜೀವನದಲ್ಲಿ ವಿಶ್ವಾಸವನ್ನು ಎಂದೂ ಕಳೆದುಕೊಳ್ಳಬಾರದು ಎಂದರು.
ವಾರ್ಷಿಕೋತ್ಸವದಲ್ಲಿ ಬಾಳೆಹೊನ್ನೂರು ವಲಯದ ಮೇಲ್ವಿಚಾರಕ ಧರ್ಮಗುರು ಲ್ಯಾನ್ಸಿ ಪಿಂಟೊ, ಚಿಕ್ಕಮಗಳೂರು ವಲಯದ ಧರ್ಮಗುರು ಅಂತೋನಿ ಪಿಂಟೊ, ಬಣಕಲ್ ಧರ್ಮಗುರು ಆಲ್ಬರ್ಟ್ ಡಿಸಿಲ್ವ, ಜಾರ್ಜ್ ಮೋನಿಸ್, ಅಂತೋನಿ ಡಿಸೋಜ, ಹಿರೇಬೈಲ್ ಧರ್ಮಗುರು ಜಾರ್ಜ್ ಅಂದ್ರಾದೆ, ಮೂಡಿಗೆರೆ ಸಂತ ಅಂತೋನಿ ಧರ್ಮಕೇಂದ್ರದ ಧರ್ಮಗುರು ಪೌಲ್ ಮಚಾದೊ, ಜೆರೋಮ್ ಮಚಾದೋ, ಅಂತೋನಿ ವಾಸ್, ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಸೇರಿದಂತೆ ಜಿಲ್ಲೆಯ ವಿವಿಧ 25ಕ್ಕೂ ಅಧಿಕ ಧರ್ಮಗುರುಗಳು ಹಾಗೂ ಬಣಕಲ್, ಬಾಳೂರು, ಕೊಟ್ಟಿಗೆಹಾರ, ಜಾವಳಿಯ ಭಕ್ತಾಧಿಗಳು ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.