ಮೂಡಿಗೆರೆ : ಬಣಕಲ್‍ನಲ್ಲಿ ಕೇಂದ್ರ ಸರಕಾರದ ಮಹತ್ವದ ಆರ್ಥಿಕ ಗಣತಿಗೆ ಚಾಲನೆ…

159
firstsuddi

ಮೂಡಿಗೆರೆ : ದೇಶ ಯಾವ ಮಟ್ಟದ ಆರ್ಥಿಕ ಸ್ಥಿತಿಯಲ್ಲಿದೆ ಎಂದು ತಿಳಿಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಆರ್ಥಿಕ ಗಣತಿ ಆರಂಭಿಸಿದ್ದು, ಗ್ರಾಮಸ್ಥರು ಕುಟುಂಬದಲ್ಲಿನ ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಬಣಕಲ್ ಆರ್ಥಿಕ ಗಣತಿಯ ಮೇಲ್ವಿಚಾರಕರಾದ ಆಲನ್ ಮೆಂಡೋನ್ಸಾ ಹೇಳಿದರು.
ಅವರು ಬಣಕಲ್‍ನಲ್ಲಿ ಬುಧವಾರದಂದು ಆರ್ಥಿಕ ಗಣತಿಗೆ ಚಾಲನೆ ನೀಡಿ ಮಾತನಾಡಿ, ಜನರು ಗಣತಿ ಬಗ್ಗೆ ಯಾವುದೇ ಅನುಮಾನ ಪಡದೇ ತಮ್ಮ ಕುಟುಂಬದ ಆರ್ಥಿಕತೆಯ ಮಾಹಿತಿ ನೀಡುವುದು. ದೇಶದ ಜನರ ಆರ್ಥಿಕ ಚಟುವಟಿಕೆಗಳ ಕ್ರೋಢೀಕರಣ ಹಾಗೂ ಅಭಿವೃದ್ಧಿಯ ಮಟ್ಟ ತಿಳಿಯುವ ಮುಖ್ಯ ಉದ್ದೇಶದಿಂದ ಕೇಂದ್ರ ಸರಕಾರ ಏಳನೇ ಆರ್ಥಿಕ ಗಣತಿಗೆ ಮುಂದಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತಯಾರಿಸವಲ್ಲಿ ಈ ಗಣತಿ ಬಹಳ ಮುಖ್ಯ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಈ ಅಭಿಯಾನದಲ್ಲಿ ಸಹಕರಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ, ಜನರ ಆರ್ಥಿಕ ಗಣತಿಯು ಅಭಿವೃದ್ದಿ ಮಟ್ಟವನ್ನು ಅಳೆಯುವ ಅಳತೆಗೋಲಾಗಿದ್ದು ಇದರ ಗಣತಿಯನ್ನು ಕೇಂದ್ರ ಸರಕಾರ ಸಿಎಸ್‍ಸಿವಿಎಲ್‍ಇಗಳಿಗೆ ವಹಿಸಿದೆ. ಅದ್ದರಿಂದ ಗಣತಿಯ ಕುರಿತು ಜನರು ಭಯ ಪಡುವ ಅಗತ್ಯವಿಲ್ಲ. ಆರ್ಥಿಕ ಸಂಕಷ್ಟ ನೀಗಿಸುವುದೇ ಕೇಂದ್ರ ಸರಕಾರದ ಉದ್ದೇಶವಾಗಿದೆ. ವಾಸ್ತಾವಾಂಶದಿಂದ ಕೂಡಿದ ನಿಖರ ಹಾಗೂ ನಿರ್ಧೀಷ್ಟ ಮಾಹಿತಿಯನ್ನು ಕ್ರೋಢಿಕರಿಸಿದ ಆಧಾರದ ಮೇಲೆ ಮುಂದೆ ಬರುವ ಸರಕಾರದ ಯೋಜನೆಗಳಿಗೆ ನಿಮ್ಮ ಆರ್ಥಿಕ ಗಣತಿಯ ಮಾಹಿತಿಯೇ ಆಧಾರವಾಗಿರುತ್ತದೆ. ಆದ್ದರಿಂದ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯುತ ನಡೆಯಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಿ ಎಂದರು.
ಆರ್ಥಿಕ ಗಣತಿಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ನಾಣಯ್ಯ, ಗಣತಿಯ ಎಣಿಕೆದಾರ ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸುಧೀರ್, ಮಂಜುಳ, ಹೆಚ್.ಎಂ.ರಾಮಚಂದ್ರೇಗೌಡ ಇದ್ದರು.