ಕೊಟ್ಟಿಗೆಹಾರ : ಬಾರ್ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಾವ 3-30ರ ಸುಮಾರಿಗೆ ಬಣಕಲ್ ಪಟ್ಟಣದಲ್ಲಿರುವ ಸಂಭ್ರಮ್ ಬಾರ್ ನ ನ ಬೀಗ ಮುರಿದು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಾರ್ ನಲ್ಲಿ ಹಣ ಸಿಗದೇ ಇದ್ದಾಗ ಮದ್ಯವನ್ನು ಮುಟ್ಟದೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಾರ್ ನ ಮುಂಬಾಗಿಲ ಬೀಗ ಮುರಿದು ಕಳ್ಳರು ಬಾರ್ ನಲ್ಲಿ ಕಳವು ಮಾಡಲು ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸ್ಥಳಕ್ಕೆ ಬಣಕಲ್ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










