ಮೂಡಿಗೆರೆ : ಮಕ್ಕಳಲ್ಲಿ ಓದುವ ಹವ್ಯಾಸ ಹಾಗೂ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಗತ್ಯ : ಎಂ.ಪಿ.ಕುಮಾರಸ್ವಾಮಿ.

222
firstsuddi

ಮೂಡಿಗೆರೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಹಾಗೂ ಸಾಧನೆಯಲ್ಲಿ ಯಶಸ್ಸು ಕಾಣಲು ಗುರುವಿನ ಸಹಕಾರವಿಲ್ಲದೇ ಸಾಧ್ಯವಾಗುವುದಿಲ್ಲವೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಇಂದು ಗೋಣಿಬೀಡು ಸೂಪರ್ ಕನ್ವೆನ್ಷನ್ ಭವನದಲ್ಲಿ ಜಿ.ಪಂ, ತಾ.ಪಂ. ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ 59ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಓದುವ ಹವ್ಯಾಸ ಹಾಗೂ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಗತ್ಯ. ಶಿಕ್ಷಣ ಹಾಗೂ ಶಿಕ್ಷಕರ ಮಾರ್ಗದರ್ಶನ ಸಿಗದವರು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುವಲ್ಲಿ ಬಹಳ ಕಷ್ಟಪಡಬೇಕಾದೀತು. ಶಿಕ್ಷಣದ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಶಿಕ್ಷಕರ ಮೇಲೆ ಸಮಾಜದಲ್ಲಿ ಅಪಾರ ಗೌರವವಿದೆ. ಶಿಕ್ಷಕರ ಕೊರತೆ ಏನೇ ಇದ್ದರೂ ಅದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹರಿಸುವಲ್ಲಿ ಪ್ರಯತ್ನಪಡುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಿಗಾಗಿ ಸಮಾಜವನ್ನು ಸ್ಪರ್ಧೇಗೆ ಇಳಿಸಿ ಶಿಕ್ಷಣ ಕ್ಷೇತ್ರವನ್ನು ಶ್ರೇಷ್ಟತೆ ಸಾಲಿಗೆ ಕೊಂಡೊಯ್ದ ಗುರುವಿನ ಪಾತ್ರ ಮಹತ್ತರವಾದದ್ದು. ಸರಕಾರಿ ಶಾಲೆಗಳಲ್ಲಿ ಶೇ.100 ಫಲಿತಾಂಶ ತರುವ ಮೂಲಕ ಸರಕಾರಿ ಶಾಲೆಗಳ ಮೇಲಿರುವ ಕೀಳರಿಮೆಯನ್ನು ಶಿಕ್ಷಕರು ಹೋಗಲಾಡಿಸಿದ್ದಾರೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಗುರುವಿನ ಸ್ಥಾನವನ್ನು ನಿರಂತರವಾಗಿ ಮುಂದುವರೆಸಿಕೊಂಡು ಜಗತ್ತಿನ ಎಲ್ಲಾ ರಂಗದಲ್ಲೂ ಗುರುವಿಗೆ ಸರ್ವಶ್ರೇಷ್ಟ ಸ್ಥಾನ ಮಾನವಿ. ಅದರಲ್ಲಿಯೂ ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಪ್ರಧಾನ ಸ್ಥಾನ ನೀಡಲಾಗಿದೆ ಎಂದರೆ ಗುರುವಿನ ಮಹತ್ವ ಅರಿಯಬೇಕಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಪ್ರತಿ ಬಾರಿಯೂ ಶಿಕ್ಷಕರು ತಮ್ಮ ಸಮಾಥ್ರ್ಯವನ್ನು ಸಾಬೀತುಪಡಿಸುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.
ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಜಿಲ್ಲೆಯಲ್ಲಿ ಮೂಡಿಗೆರೆ ತಾಲೂಕು ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿರಬೇಕಿತ್ತು. ಇಲ್ಲಿನ ಶಿಕ್ಷಕರು ಶ್ರಮವಹಸಿ ದುಡಿಯುವವರಾಗಿದ್ದಾರೆ. ಜಿಲ್ಲೆಯ ಕೆಲ ಸಣ್ಣ ತಾಲೂಕಿನಲ್ಲಿ 2 ಅಥವಾ 3 ಪ್ರೌಢಶಾಲೆಗಳಿದ್ದು, ಆ ತಾಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ. ಆದರೆ ನಮ್ಮ ತಾಲೂಕಿನಲ್ಲಿ 18 ಪ್ರೌಢಶಾಲೆ ಇರುವುದರಿಂದ ಫಲಿತಾಂಶದಲ್ಲಿ 3 ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ ಎಂದು ತಿಳಿಸಿದರು.
ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ನಿಖಿತಾ, ಕೆ.ಸಿ.ಸಂಜನಾ, ಸುಶ್ಮಿತಾ, ಪ್ರತಿಕ್ಷಾ, ಬಿ.ಪಿ.ಪ್ರಜ್ವಲ್, ಯು.ಎಂ.ವಂದನಾ ವಿದ್ಯಾರ್ಥಿಗಳು, ತಾಲೂಕಿನಲ್ಲಿ ಶೇ.100 ರಷ್ಟು ಪಲಿತಾಂಶ ಬಂದಿದ್ದ ಶಾಲೆ ಮುಖ್ಯ ಶಿಕ್ಷಕಿಯರು ಹಾಗೂ ನಿವೃತ್ತ ಶಿಕ್ಷಕರಾದ ಮಂಜುಳಾ, ಮಾರಯ್ಯ, ಹನುಮಂತಶೆಟ್ಟಿ, ಹರಿಯನಾಯಕ್, ಲೀನಾ ಗೋನ್ಸಾಲಿಕ್, ರಿಹಾನಾ ಬೇಗಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಜಿ.ಪಂ. ಸದಸ್ಯೆ ಅಮಿತಾ ಮುತ್ತಪ್ಪ, ತಹಸೀಲ್ದಾರ್ ಎಚ್.ಎಂ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್‍ರಾಜ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಮಂಜಪ್ಪ, ಗೋಣಿಬೀಡು ರೋಟರಿ ಕ್ಲಬ್ ಅಧ್ಯಕ್ಷ ರೋಷನ್ ಡಿಸೋಜಾ, ಶಿಕ್ಷಣ ಇಲಾಖೆಯ ಗಣೇಶಪ್ಪ, ಶಿವನಂಜೇಗೌಡ, ಸೂರ್ಯ ನಾರಾಯಣ್, ಬಿ.ಆರ್.ನವೀನ್ ಶಿವರಾಮೇಗೌಡ, ಫೈರೋಜ್ ಅಹಮ್ಮದ್, ಕೆ.ಆರ್.ಶ್ರೀನಿವಾಸ್, ವೇಣಿ, ಪ್ರೇಮ್‍ಕುಮಾರ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.