ಮೂಡಿಗೆರೆ : ಸುತ್ತಮುತ್ತ ಸುರಿಯುತ್ತಿರುವ ಅಕಾಲಿಕ ಮಳೆಗೆ ಕಾಫಿ ಬೆಳೆಗಾರರಲ್ಲಿ ಆತಂಕ…

143
firstsuddi

ಮೂಡಿಗೆರೆ : ಕಳೆದ ಕೆಲ ದಿನಗಳಿಂದ ಬಣಕಲ್, ಕೊಟ್ಟಿಗೆಹಾರ, ದಾರದಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಅರೆಬೀಕಾ ಕಾಫಿ ಕುಯ್ಲು ಪ್ರಾರಂಭವಾಗಿದ್ದು, ಕುಯ್ದ ಕಾಫಿಹಣ್ಣುಗಳನ್ನು ಕಣದಲ್ಲಿ ಒಣಗಿ ಹಾಕಲಾಗಿದ್ದು ಮಳೆಯಿಂದಾಗಿ ಕಣದಲ್ಲಿ ಒಣ ಹಾಕಿದ ಕಾಫಿಹಣ್ಣುಗಳು ಮಳೆಯಿಂದ ನೆನೆದು ಹೋಗಿವೆ. ಅಕಾಲಿಕ ಮಳೆಯಿಂದಾಗಿ ಮಳೆಯಿಂದ ಕಾಫಿಯನ್ನು ರಕ್ಷಿಸಲು ಕಾಫಿಬೆಳೆಗಾರರು ಹರಸಾಹಸ ಪಡುವಂತಾಯಿತು. ಪ್ಲಾಸ್ಟಿಕ್ ಟಾರ್ಪಾಲ್‍ಗಳನ್ನು ಹೊಂದಿಸಿಕೊಂಡು ಕಣದಲ್ಲಿ ಹರಡಿದ ಕಾಫಿ ಹಣ್ಣನ್ನು ರಾಶಿ ಮಾಡಿ ಮುಚ್ಚಲಾಯಿತು.
ಮಳೆಯಿಂದಾಗಿ ಗಿಡದಲ್ಲಿ ಹಣ್ಣಾಗಿ ನಿಂತ ಕಾಫಿಹಣ್ಣುಗಳು ನೆಲಕ್ಕೆ ಉದುರುವ ಸಾಧ್ಯತೆ ಇದ್ದು, ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ಈ ವರ್ಷ ಮಳೆಯಿಂದಾಗಿ ಫಸಲು ಕಡಿಮೆ ಇದ್ದು ಅಲ್ಪಸ್ವಲ್ಪ ಉಳಿದ ಫಸಲನ್ನು ಪಡೆಯುವ ಕಾಫಿಬೆಳೆಗಾರರ ನಿರೀಕ್ಷೆ ಅಕಾಲಿಕ ಮಳೆಯಿಂದ ಹುಸಿಯಾಗುವಂತಿದೆ.