ಮೂಡಿಗೆರೆ:- ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯವಕನಿಗಾಗಿ ನಿಲ್ಲದ ಶೋಧ ಕಾರ್ಯ…

473
firstsuddi

ಮೂಡಿಗೆರೆ:-ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೂರು ಕೂಡಿಗೆ ಸಮೀಪ ಗದ್ದೆಗೆ ಹೋದಂತಹ ಶ್ರೀಹರ್ಷ-22 ಎಂಬ ಯುವಕನು ನಿನ್ನೆ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಮದ್ಯಾಹ್ನ ಇಲ್ಲಿನ ಕೂಡಿಗೆ ಹೇಮಾವತಿ ನದಿಯ ಪಕ್ಕದಲ್ಲೇ ಇದ್ದಂತಹ ಗದ್ದೆಗೆ ಇಳಿದ ಪರಿಣಾಮ ನೀರಿನ ಸಾಂಧ್ರತೆಯನ್ನು ಅರಿಯದೇ  ಕೊಚ್ಚಿ ಹೋಗಿದ್ದು, ಕೊಚ್ಚಿಹೋದ ಯುವಕನನ್ನು ಗ್ರಾಮಸ್ಥರು ಹಾಗೂ ಅಧಿಕಾರಿಗಳು ತಡರಾತ್ರಿಯವರೆಗೂ ಶೋಧ ಕಾರ್ಯದಲ್ಲಿ ತೊಡಗಿದ್ದರೂ ಅದು ಸಫಲವಾಗದೆ ಹಿಂತಿರುಗಿದ್ದರು.

ಇಂದು ತಾಲ್ಲೂಕು ಆಡಳಿತದ ನಿರ್ಧೇಶನದ ಮೇರೆಗೆ ರಾಷ್ಟ್ರೀಯ ವಿಪತ್ತು ನಿಗಮ,(ಎನ್.ಡಿ.ಆರ್.ಎಫ್.) ಹಾಗೂ ಮೂಡಿಗೆರೆ ಅಗ್ನಿಶಾಮಕ ಠಾಣೆ, ತಾಲ್ಲೂಕು ಸಮಾಜ ಸೇವಕರು ಇನ್ನಿತರ ಜಂಟಿ ಸಹಯೋಗದಲ್ಲಿ ನೀರಿನಲ್ಲಿ ಕೊಚ್ಚಿಹೋದ ಯುವಕನನ್ನು ಮೇಲೆ ತರಲು ಇಂದು ಬೆಳಗ್ಗಿನಿಂದಲೇ ಬರದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಇದುವರೆಗೂ ತೇಲಿಹೋದಂತಹ ಯುವಕನ ಮಾಹಿತಿ  ಸಿಕ್ಕಿರುವುದಿಲ್ಲ ಎಂದು ಶೋಧ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಎನ್.ಡಿ.ಆರ್.ಎಫ್ ತಂಡ ತಿಳಿಸಿದ್ದಾರೆ.

ಶೋಧ ಕಾರ್ಯದ ಸ್ಥಳಕ್ಕೆ ಸಂಸದೆ ಶೋಭಾ ಕಾರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಪ್ರಾಣೇಶ್, ಶಾಸಕ ಎಂ.ಪಿ.ಕುಮಾರಸ್ವಾಮಿ, ಹಾಗೂ ತಹಶೀಲ್ದಾರರು ಆಗಮಿಸಿ ಸ್ಥಳದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಮಾಹಿತಿಯನ್ನು ಪಡೆದು ತೆರೆಳಿದ್ದು, ಸ್ಥಳದಲ್ಲಿ ನಿರಂತರವಾಗಿ ನಿನ್ನೆಯಿಂದಲೂ ಬೀಡುಬಿಟ್ಟು ಶೋಧ ಕಾರ್ಯದಲ್ಲಿ ತೊಡಗಿದ್ದು, ಸ್ಥಳದಲ್ಲಿ ಮೂಡಿಗೆರೆ ವೃತ್ತನಿರೀಕ್ಷಕ ರಘು, ಸಮಾಜ ಸೇವಕರಾದ ಫಿಶ್ ಮೋಣು, ಸುಲೈಮಾನ್, ದಾರದಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಪಂಚಾಕ್ಷರಿ, ಮಾಜಿ ಗ್ರಾ.ಪಂ.ಸದಸ್ಯ ರಜಾಕ್, ಹಾಗೂ ಕೆಲವು ಗ್ರಾಮದ ಮುಖಂಡರು ಸ್ಥಳದಲ್ಲೇ ಇದ್ದು ಅವರೊಂದಿಗೆ ಸಹಕಾರ ನೀಡುತ್ತಿದ್ದಾರೆ.