ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಲಪಾಡ್ ಸ್ನೇಹಿತ ನಜೀರ್ ಅವರಿಂದ ಫಾರ್ಚೂನರ್ ಕಾರು ಪಡೆದಿದ್ದರು. ಚುನಾವಣೆ ನಡೆದ ಬಳಿಕ ತನ್ನ ಕಾರನ್ನು ಮರಳಿ ಹಿಂದಿರುಗಿಸುವಂತೆ ನಜೀರ್ ಕೇಳಿದ್ದಾರೆ. ಆದರೆ ಕಾರು ನೀಡದ ನಲಪಾಡ್ ಬೆದರಿಕೆ ಹಾಕಿದ್ದರಂತೆ.
ಕಾರು ಕೊಡದೇ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಲಪಾಡ್ ವಿರುದ್ಧ ನಜೀರ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎನ್‍ಸಿಆರ್ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










