ಚಾಮರಾಜನಗರ : ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲ್ಲ ಎಂದಿದ್ದಕ್ಕೆ ಮನನೊಂದು ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಕೊಳ್ಳೇಗಾಲದ ಬಸ್ತೀಪುರ ಬಡಾವಣೆಯ ಬಸವರಾಜು ಎಂಬವವರ ಮಗಳು ಹರ್ಷಿತಾ (12) ಎಂದು ಗುರುತಿಸಲಾಗಿದೆ. ಈಕೆ ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತಂದುಕೊಡಿ ಎಂದು ಪೋಷಕರನ್ನು ಕೇಳಿದಾಗ ಅವರು ಸಂಬಳವಾದ ಬಳಿಕ ಬಟ್ಟೆ ತೆಗೆದುಕೊಡ್ತೀವಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಬೇಸರಗೊಂಡ ಹರ್ಷಿತಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










