ಯುವತಿ ಕೊಟ್ಟಿರುವ ದೂರಿನ ಪ್ರತಿಯನ್ನು ಮಧ್ಯಾಹ್ನ ಪೊಲೀಸ್ ಆಯುಕ್ತರಿಗೆ ತಲುಪಿಸುತ್ತೇನೆ : ಸಿಡಿ ಯುವತಿ ಪರ ವಕೀಲ…

215
firstsuddi

ಬೆಂಗಳೂರು : ಸಿಡಿ ಪ್ರಕರಣ ಸಂಬಂಧ ಇಂದು ಯುವತಿ ತನ್ನ ಮೂರನೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಇಂದು ದೂರು ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಯುವತಿ ಪರ ವಕೀಲ ಜಗದೀಶ್ ಅವರು ಮಾತನಾಡಿ, ಯುವತಿ ಕೊಟ್ಟಿರುವ ದೂರಿನ ಪ್ರತಿಯನ್ನು ಇಂದು ಮಧ್ಯಾಹ್ನ 2.30ಕ್ಕೆ ಪೊಲೀಸ್ ಆಯುಕ್ತರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದಾರೆ.

ಸಿಡಿಯಲ್ಲಿರುವ ಯುವತಿಯು ನನಗೆ ರಕ್ಷಣೆ ಬೇಕೆಂದು ಬಹಿರಂಗವಾಗಿಯೇ ಒಂದು ವೀಡಿಯೋ ಬಿಡುಗಡೆ ಮಾಡಿದ್ದಳು. ಆ ಯುವತಿ ಸಾಮಾನ್ಯ ಮಹಿಳೆಯಾಗಿದ್ದಾರೆ. ಹೀಗಾಗಿ ಆಕೆಗೆ ನಾವು ಸಹಾಯ ಮಾಡುತ್ತಿದ್ದೇವೆ. ನಾನು ಯಾವುದೇ ರೀತಿಯಲ್ಲಿ ದೂರನ್ನು ನೀಡುತ್ತಿಲ್ಲ.  ಇಂದು ಆಕೆಯೇ ಕೊಟ್ಟಿರುವ ದೂರಿನ ಪ್ರತಿಯನ್ನು ಮಧ್ಯಾಹ್ನ 2.30ಕ್ಕೆ ಪೊಲೀಸ್ ಆಯುಕ್ತರಿಗೆ ತಲುಪಿಸುತ್ತೇವೆ. ಮುಂದಿನ ನಿರ್ಧಾರ ಪೊಲೀಸ್ ಆಯುಕ್ತರಿಗೆ ಬಿಟ್ಟಿದ್ದು, ಅಲ್ಲದೇ ಆಕೆಗೆ ರಕ್ಷಣೆ ಕೊಟ್ಟರೆ ಪೊಲೀಸರ ಮುಂದೆ ಬಂದು ಹೇಳಿಕೆ ನೀಡುತ್ತಾಳೆ ಎಂದು ವಕೀಲ ಜಗದೀಶ್ ಕೆ.ಎನ್. ಮಹದೇವ್ ಅವರು ತಿಳಿಸಿದ್ದಾರೆ.