ಯುವತಿ ಮೇಲೆ ಅತ್ಯಾಚಾರವೆಸಗಿ, ಆಕೆಗೆ ಬಲವಂತವಾಗಿ ವಿಷ ಕುಡಿಸಿದ ಕಾಮುಕ…

85
firstsuddi

ಲಕ್ನೋ : ವ್ಯಕ್ತಿಯೊಬ್ಬ 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ಬಲವಂತವಾಗಿ ವಿಷ ಕುಡಿಸಿದ ಘಟನೆ ಉತ್ತರಪ್ರದೇಶದ ಜೆಹಾನಾಬಾದ್ ನಲ್ಲಿ ನಡೆದಿದೆ.

ಕಮಲ್ ಎಂಬಾತ ತನ್ನ ನೆರೆಮನೆಯ 18 ವರ್ಷದ ಯುವತಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಬಾಯಿಗೆ ಬಟ್ಟೆಯನ್ನು ಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ವಿರೋಧಿಸಲು ಯತ್ನಿಸಿದಾಗ ಆಕೆಯನ್ನು ತೀವ್ರವಾಗಿ ಥಳಿಸಿ, ಬಲವಂತವಾಗಿ ವಿಷ ಕುಡಿಸಿದ್ದಾನೆ.

ಈ ವೇಳೆ ಯುವತಿಯನ್ನು ಹುಡುಕುತ್ತಾ ಆಕೆಯ ಕುಟುಂಬಸ್ಥರು ಕಮಲ್ ಮನೆಗೆ ಬಂದಾಗ, ಆತನ ಕುಟುಂಬಸ್ಥರು ಯುವತಿಯ ತಾಯಿಗೆ ಕೆಟ್ಟದಾಗಿ ಬೈದು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಿಸಿದ್ದಾರೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಪಿಲಿಭಿತ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಪೋಷಕರು, ಕಿರಿಯ ಸಹೋದರ, ಸಹೋದರಿ ಮತ್ತು ಅಜ್ಜಿ ಸೇರಿದಂತೆ ಪ್ರಮುಖ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 328 (ಯಾವುದೇ ವ್ಯಕ್ತಿಗೆ ವಿಷ ನೀಡುವುದು), 323 (ಸ್ವಯಂಪ್ರೇರಿತ ಗಾಯಗೊಳಿಸುವುದು), 504 ( ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈವರೆಗೂ ಪ್ರಕರಣದಲ್ಲಿ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ಎಸ್ ಎಚ್ ಒ ಪ್ರಬಾಶ್ ಚಂದ್ರ ತಿಳಿಸಿದ್ದಾರೆ.