ಬೆಂಗಳೂರು : ತಮಿಳುನಾಡು ಮುಜರಾಯಿ ಖಾತೆ ಸಚಿವ ಪಿ.ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಮತ್ತು ಆಕೆಯ ಪತಿ ಸತೀಶ್ ಗೃಹ ಸಚಿವರನ್ನು ಭೇಟಿಯಾಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಜಯಕಲ್ಯಾಣಿ ಅವರು ಸತೀಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆಯಿದ್ದು, ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರು ರಕ್ಷಣೆ ಒದಗಿಸುವುದಾಗಿ ಹೇಳಿದ್ದಾರೆ. ಜೊತೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಲ್ಲಿಯೂ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.










