ಚೆನ್ನೈ : ತಮಿಳುನಾಡಿನ ಕೊಯಮತ್ತೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿ ಸೇರಿಕೊಂಡಿದ್ದಾನೆ.
ಉಕ್ರೇನ್ ಮಿಲಿಟರಿ ಪಡೆ ಸೇರ್ಪಡೆಯಾಗುವುದಕ್ಕೂ ಮುಂಚಿತವಾಗಿ ಸೈನಿಕೇಶ್ ರವಿಚಂದ್ರನ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಕೆ ಮಾಡಿದ್ದು, ಅದು ತಿರಸ್ಕೃತಗೊಂಡ ಬಳಿಕ ಆತ ಈ ನಿರ್ಧಾರ ಕೈಗೊಂಡಿದ್ದಾನೆಂದು ತಿಳಿದು ಬಂದಿದೆ. ಇದರ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಕೆಲ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೋಷಕರು ಮಾಹಿತಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
2018ರಲ್ಲಿ ಸೈನಿಕೇಶ್ ಖಾರ್ಕಿವ್ ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಉಕ್ರೇನ್ ಗೆ ತೆರಳಿದ್ದರು. ಈ ನಡುವೆ ಉಕ್ರೇನ್ ನಲ್ಲಿ ಯುದ್ಧ ಆರಂಭವಾಗಿದ್ದು, ಸಾಯಿನಿಕೇಶ್ ಉಕ್ರೇನ್ ಮಿಲಿಟರಿ ಸೇರಿಕೊಂಡಿದ್ದಾರೆ.










