ರಸ್ತೆ ಅಭಿವೃದ್ಧಿ : ಜಿಲ್ಲಾ ಸಹೋದರತ್ವ ಸಮಿತಿ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ…

92
firstsuddi

ಚಿಕ್ಕಮಗಳೂರು : ತಮ್ಮ ರಸ್ತೆಯನ್ನು ಅಭಿವೃದ್ಧಿ ಪಡಿಸಿದ ಹಿನ್ನಲೆಯಲ್ಲಿ ನಗರದ ಶಂಕರಪುರ 5ನೇ ಅಡ್ಡ ರಸ್ತೆಯ ನಾಗರೀಕರು ಜಿಲ್ಲಾ ಸಹೋದರತ್ವ ಸಮಿತಿಯ ನೇತೃತ್ವದಲ್ಲಿ ನಿನ್ನೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಮತ್ತು ಆಯುಕ್ತರನ್ನು ಸನ್ಮಾನಿಸಿ ಅಭಿನಂದಿಸಿದರು.

ನಗರದ ಶಂಕರಪುರದ 5ನೇ ಅಡ್ಡರಸ್ತೆ ಬಹಳ ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಳಾಗಿತ್ತು. ಗುಂಡಿಗೊಟರುಗಳಿಂದ ಕೂಡಿದ್ದ ರಸ್ತೆಯಲ್ಲಿ ಸಂಚರಿಸಲಾಗದೆ ಸ್ಥಳಿಯ ನಿವಾಸಿಗಳು ಪರದಾಡುತ್ತಿದ್ದರು.

ಇತ್ತೀಚೆಗೆ ಬಹುಜನ ಸಮಾಜದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮತ್ತು ಜಿಲ್ಲಾ ಸಹೋದರತ್ವ ಸಮಿತಿಯ ನೇತೃತ್ವದಲ್ಲಿ ಸ್ಥಳಿಯ ನಿವಾಸಿ ಗಳು ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ತಮ್ಮ ರಸ್ತೆಯನ್ನು ಅಭಿ ವೃದ್ಧಿ ಪಡಿಸುವಂತೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂಧಿಸಿದ ಪೌರಾಯುಕ್ತ ಬಸವರಾಜ್ ಕೆಲವೇ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಹೋದ ರತ್ವ ಸಮಿತಿಯ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪ ಡಿಸಿ ಸಮಾರಂಭಕ್ಕೆ ಆಗಮಿಸುವಂತೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಮತ್ತು ಆಯುಕ್ತರನ್ನು ಸ್ಥಳಿಯ ನಿವಾಸಿಗಳು ಆಹ್ವಾನಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾ ಲ್, ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಆಯುಕ್ತ ಬಸವರಾಜ್, ಸ್ಥಳಿಯ ನಗರಸಭೆ ಸದಸ್ಯ ಗೋಪಿ ಮತ್ತು ರಸ್ತೆ ನಿರ್ಮಿಸಿದ ಇಂಜಿನಿಯರ್ ಚಂದನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಶಂಕರಪುರ ಸೇರಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಕಂಕಣ ಬದ್ಧರಾಗಿದ್ದು, ನಾಗರೀಕರು ತಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಶಂಕರಪುರದ 5ನೇ ಅಡ್ಡರಸ್ತೆ ಬಹಳಷ್ಟು ವರ್ಷಗಳಿಂದ ಗುಂಡಿ ಗೊಟರುಗಳಿಂದ ಕೂಡಿ ಓಡಾಡಲು ಅಸಾಧ್ಯವಾಗಿತ್ತು. ಅನೇಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ. ಯಾರು ಅತ್ತ ತಿರುಗಿ ನೋಡಿರಲಿಲ್ಲ ಆದರೆ, ಪೌರಾಯುಕ್ತ ಬಸವರಾಜ್ ಅವರು ತಮ್ಮ ಮನವಿಗೆ ಸ್ಪಂದಿಸಿ ತಕ್ಷಣ ರಸ್ತೆ ಅಭಿವೃದ್ಧಿಪಡಿಸಿದ್ದು, ಆ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಪಕ್ಷದ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ನವೀನ್, ರಾಜು, ಸ್ಥಳೀಯ ನಿವಾಸಿ ಕೃಷ್ಣಯ್ಯ ಉಪಸ್ಥಿತರಿದ್ದರು.