ರಾಜಕೀಯವಾಗಿ ನನಗೆ ವಿಷ ಹಾಕಿದ್ದಾರೆ. ನನ್ನನ್ನು ಮುಗಿಸಲು ಯತ್ನಿಸಿದ್ರು, ಆದ್ರೆ ಆಗ್ಲಿಲ್ಲ: ಡಿಕೆಶಿ ವಿರುದ್ಧ ಹೆಚ್‍ಡಿಕೆ ಕಿಡಿ…

41
firstsuddi

ಬೆಂಗಳೂರು: ರಾಜಕೀಯವಾಗಿ ನನಗೆ ವಿಷ ಹಾಕಿದ್ದಾರೆ. ನನ್ನನ್ನು ಮುಗಿಸಲು ಯತ್ನಿಸಿದ್ರು, ಆದ್ರೆ ಆಗ್ಲಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನ ನಿಮ್ಮನ್ನ ತಿರಸ್ಕರಿಸಿದಾಗ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಮ್ಮನ್ನ ಬಿಜೆಪಿ ಬಿ ಟೀಮ್ ಅಂತ ಕರೆದ್ರಿ. ನಿಮ್ಮ ಜೊತೆ ಮೈತ್ರಿ ಮಾಡ್ಕೊಂಡು ನಮ್ಮ ಪಕ್ಷ ನಾಶ ಮಾಡಲು ಹೊರಟರು. ನನ್ನ ಮುಗಿಸಲು ಹಂತಹಂತವಾಗಿ ನೀವು ಏನೇನ್ ಮಾಡಿದ್ದೀರಿ ಗೊತ್ತಿದೆ. ರಾಜಕೀಯವಾಗಿ ನನಗೆ ವಿಷ ಹಾಕಿದ್ದೀರಿ ಎಂದು ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಹೊರಗಡೆ ನಮ್ಮನ್ನ ಉಳಿಸೋ ತರ ನಾಟಕ ಮಾಡ್ತೀರಿ. ಟ್ರಬಲ್ ಶೂಟರ್ ಅಂತ ದುಡ್ಡು ಕೊಟ್ಟು ಕರೆಸಿಕೊಂಡ್ರಿ. ನಮ್ಮ ಪಕ್ಷವನ್ನ ನಿರ್ಣಾಮ ಮಾಡಲು ಹೊರಟಿದ್ರಿ. ಈಗಲೂ ನಮ್ಮ ಪಕ್ಷವನ್ನ ಮುಗಿಸಲು ಹೊರಟಿದ್ದೀರಿ. ಕಳೆದ ಚುನಾವಣೆಯಲ್ಲಿ ನಿಮ್ಮ ಸಹೋದರನ ಗೆಲವು ಯಾರಿಂದ ಆಯ್ತು. ನಾವಿಲ್ಲ ಅಂದಿದ್ರೇ ನಿಮ್ಮ ಸಹೋದರ ಸೋಲುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ಅಧಿಕಾರ ದುರುಪಯೋಗ ಮಾಡ್ತಿದ್ದೀರಿ. ಅಧಿಕಾರಿಗಳಿಗೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ತಾಕೀತು ಮಾಡ್ತೀರಿ. ಬಿಜೆಪಿಯಲ್ಲಿ ನಿಮ್ಮ ತರ ನಮ್ಮನ್ನ ನಡೆಸಿಕೊಂಡಿಲ್ಲ. ನಿಮ್ಮ ತರ ಕುತ್ತಿಗೆ ಕುಯ್ಯುವ ಕೆಲಸ ಮಾಡಿಲ್ಲ. ಡಿಕೆ ಶಿವಕುಮಾರ್ ನಿಮ್ಮ ಅನುಕಂಪ ಬೇಕಿಲ್ಲ. ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಅಕ್ರಮ ಮಾಡಲು ಡಿಕೆಶಿ ಮಂದಾಗಿದ್ದಾರೆ. ರಾಜ್ಯದ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಲು ಈ ಸುದ್ದಿಗೋಷ್ಟಿ ಮಾಡ್ತಿದ್ದೇನೆ. ದೇವೆಗೌಡರ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಕೊಳ್ಳಿ ಇಟ್ಟವರು ಡಿಕೆಶಿ ಎಂದು ಹೆಚ್‍ಡಿಕೆ ಕಿಡಿಕಾರಿದರು.