ಬೆಂಗಳೂರು : ನಗರದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ.
ಪರಿಷ್ಕೃತ ಮಾರ್ಗಸೂಚಿಯಲ್ಲೇನಿದೆ?
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಬೇಕು. ಹೊರ ದೇಶದಿಂದ ಬರುವವರ ಸ್ಕ್ರೀನಿಂಗ್, ಪಾಸಿಟಿವ್ ಬಂದ ವ್ಯಕ್ತಿಯ ಮಾದರಿಯನ್ನು ಕಡ್ಡಾಯವಾಗಿ ಜೀನೋಮ್ ಪರೀಕ್ಷೆ ಒಳಪಡಿಸುವುದು ಹಾಗೂ ವ್ಯಕ್ತಿಯನ್ನ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ವೈದ್ಯರು ನಿಗಾ ಇಡಬೇಕು.
ಎಲ್ಲಾ ಐಎಲ್ ಐ ಸ್ಯಾರಿ ಕೇಸ್ ಗಳ ಡೇಟಾವನ್ನು ಐಡಿಎಸ್ ನಲ್ಲಿ ಅಪ್ಲೋಡ್ ಮಾಡಬೇಕು. ಆಸ್ಪತ್ರೆಗಳಿಗೆ ಐಎಲ್ ಐ ಕೇಸ್ ಗಳು ದಾಖಲಾದರೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಬೇಕು. ಸಮುದಾಯ ಮಟ್ಟದಲ್ಲಿ ಕೇಸ್ ಬ್ರೇಕ್ ಥ್ರೂ ಆಗಿದ್ದರೆ ಅಲ್ಲಿ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಗಾಗಿ ರವಾನೆ ಮಾಡಬೇಕು.
ಕ್ಲಸ್ಟರ್ ಗಳಲ್ಲಿ ಪಾಸಿಟಿವ್ ಬಂದ ಸ್ವಾಬ್ ಗಳನ್ನು ಕಡ್ಡಾಯವಾಗಿ ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಬೇಕು. ಬೆಂಗಳೂರು ಮತ್ತು ಇತರೆ ಜಿಲ್ಲೆಗಳಲ್ಲಿ ನಡೆಯುವ ಟೆಸ್ಟಿಂಗ್ ಕೇಂದ್ರಗಳಿಂದ ಆಯ್ದಾ ಸ್ವಾಬ್ ಗಳನ್ನ ಜಿನೋಮ್ ಸೀಕ್ವೆನ್ಸಿಂಗ್ ಗೆ ರವಾನೆ ಮಾಡಬೇಕು.










