ಜೂನ್ 19ಕ್ಕೆ ಕಾಮೆಡ್-ಕೆ ಪರೀಕ್ಷೆ.

49
firstsuddi

ಬೆಂಗಳೂರು : ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ ನಡೆಯಲಿದ್ದು, ಕಾಮೆಡ್-ಕೆ ಪರೀಕ್ಷೆಗೆ 61,635 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಹಲವು ಪರೀಕ್ಷೆಗಳ ಅಕ್ರಮ ಹಿನ್ನೆಲೆಯಲ್ಲಿ ಕಾಮೆಡ್-ಕೆಯಲ್ಲೂ ಅಕ್ರಮಗಳನ್ನು ತಡೆಯಲು ನೀಟ್ ಮಾದರಿಯ ನಿಯಮ ಜಾರಿ ಮಾಡಲಾಗಿದೆ.

ಕಾಮೆಡ್-ಕೆ ಪರೀಕ್ಷೆಯನ್ನು ಜೂನ್ 19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 2:50 ರಿಂದ 5:50 ರವರೆಗೆ ನಡೆಸಲಿದ್ದೇವೆ. ಜೂನ್ 22ರಂದು ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಲಾಗುವುದು. ಪರೀಕ್ಷಾ ಅಂಕಗಳು ಜುಲೈ 5 ರಂದು ಬೆಳಗ್ಗೆ 11 ರಿಂದ ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.