ರಾಮನಗರ : ಗಣೇಶ ಹಬ್ಬದ ದಿನದಂದೇ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ವಲಯದ ಮಲ್ಲಂಗೆರೆ ಗ್ರಾಮದ ಎನ್.ಆರ್. ಕಾಲೋನಿ ಬಳಿ ತೋಟದಲ್ಲಿ ನಡೆದಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಗಜಪಡೆಯಲ್ಲಿ ಅಂದಾಜು 35 – 40 ವರ್ಷದ ಈ ಆನೆಗೆ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ನೋವಿನಿಂದ ಕಿರುಚಿದ್ದು, ಇತರ ಆನೆಗಳು ಸ್ಥಳದಿಂದ ಪಲಾಯನ ಮಾಡಿವೆ.
ಕಳೆದ ತಿಂಗಳು ಕಬ್ಬಾಳು ಅರಣ್ಯದಲ್ಲಿ 35 ವರ್ಷದ ಗಂಡಾನೆ ಮೃತಪಟ್ಟಿತ್ತು. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ಕೂಡ ಮಾಡಲಿದ್ದಾರೆ.










