ರೈತರ ಹತ್ಯೆ ಸಮಾಜವಾದಿ, ಕಾಂಗ್ರೆಸ್ ನ ಪೂರ್ವನಿಯೋಜಿತ ಘಟನೆಯಾಗಿದೆ : ಸಚಿವೆ ಶೋಭಾ ಕರಂದ್ಲಾಜೆ.

124
firstsuddi

ಹಾಸನ : ಇಂದು ಹಾಸನಾಂಬೆ ತಾಯಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ರೈತರ ಹತ್ಯೆಯು ಅಲ್ಲಿರುವಂತಹ ಸಮಾಜವಾದಿ, ಕಾಂಗ್ರೆಸ್ ನ ಪೂರ್ವನಿಯೋಜಿತ ಘಟನೆಯಾಗಿದೆ. ಮುಂದಿನ ಉತ್ತರಪ್ರದೇಶ, ಪಂಜಾಬ್ ಚುನಾವಣೆಯನ್ನು ಗುರಿಯಾಗಿಸಿ ಈ ರೀತಿಯ ಷಡ್ಯಂತ್ರ ನಡೆದಿದೆ. ರೈತರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಈವರೆಗೆ ಹನ್ನೊಂದು ಸುತ್ತಿನ ಮಾತುಕತೆಯಾಗಿದೆ. ಪರಸ್ಪರ ಚರ್ಚೆಯಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ರಸ್ತೆಯಲ್ಲಿ ನಿಂತರೆ ಯಾವುದೇ ಸಮಸ್ಯೆ ಬಗೆಹರಿಯಲ್ಲ ಎಂದರು.

ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ಹಂತದಲ್ಲಿ ನಾನೇನು ಮಾತನಾಡುವುದಿಲ್ಲ, ತನಿಖೆಯ ವರದಿ ಬರಬೇಕು. ಕೊಲೆಯ ಹಿಂದೆ ಯಾರು ಇದ್ದಾರೆ ಎಂಬ ಸತ್ಯ ಬಯಲಾಗಬೇಕು. ಅದಕ್ಕಾಗಿ ಈಗಾಗಲೇ ಸಮಿತಿ ರೂಪಗೊಂಡಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.