ಲಾಕ್‍ಡೌನ್ ಎಫೆಕ್ಟ್ : ಮನೆಯಲ್ಲಿ ಅಡುಗೆ ಮಾಡಲು ದಿನಸಿ ಇಲ್ಲ ಎಂದು ಕಾಳಿಂಗ ಸರ್ಪವನ್ನೇ ಕೊಂದು ತಿಂದರು…!

532
firstsuddi

ಗುವಾಹಟಿ : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಿದ್ದು, ಈ ನಡುವೆ ಮನೆಯಲ್ಲಿ ಅಡುಗೆ ಮಾಡಲು ಅಕ್ಕಿ, ಬೇಳೆಕಾಳು ಇಲ್ಲ ಎಂದು 12 ಅಡಿ ಉದ್ದವಿರುವ ಕಾಳಿಂಗ ಸರ್ಪವನ್ನೇ ಕೊಂದು ಅಡಿಗೆ ಮಾಡಿ ತಿಂದಿರುವ ಭಯಾನಕ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದ್ದು, ಸರ್ಪವನ್ನು ಕೊಂದು ಬಾಳೆ ಎಲೆಯನ್ನು ಹಾಸಿ ಮಾಂಸವನ್ನು ಬೇರ್ಪಡಿಸಿಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಕಾಳಿಂಗ ಸರ್ಪವನ್ನು ಮೂವರು ತಮ್ಮ ಹೆಗಲಿನ ಮೇಲೆ ಹೊತ್ತು ನಿಂತಿರುವ ದೃಶ್ಯ ಕೂಡ ಸೆರೆಯಾಗಿದೆ. ಕೊರೊನಾ ವೈರಸ್‍ನಿಂದಾಗಿ ಮನೆಯಲ್ಲಿ ದಿನಸಿ ಖಾಲಿಯಾಗಿತ್ತು. ಹೀಗಾಗಿ ಕಾಡಿನಲ್ಲಿ ಏನಾದರು ಸಿಗಬಹುದು ಎಂದು ಹುಡುಕಾಡಿದಾಗ ನಮಗೆ ಕಿಂಗ್ ಕೋಬ್ರಾ ಸಿಕ್ಕಿತು ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.