ಬೆಂಗಳೂರು : ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗುತ್ತಿದೆ. ಆದರೆ ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಬಿಗಿಯಾದ ಕ್ರಮಗಳು ಆಗಬೇಕು, ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ. ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಪರಿಸ್ಥಿತಿಯನ್ನು ನಿಭಾಯಿಸಲು ಇಂದು ಉನ್ನತಮಟ್ಟದ ಸಭೆ ನಡೆಯಲಿದ್ದು, ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತಾರೆ. ಸರ್ವಪಕ್ಷ ಸಭೆಗಳ ನಾಯಕರ ಜೊತೆಯೂ ಚರ್ಚೆ ಮಾಡುತ್ತಾರೆ. ಇಂದೇ ಬೆಂಗಳೂರಿಗೆ ಸಂಬಂಧಪಟ್ಟಂತೆ ರೂಲ್ಸ್ ಆಗಬಹುದು. ಇಲ್ಲ ನಾಳೆ ಸರ್ವಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ನಾಳೆಯೇ ರೂಲ್ಸ್ ಬರಬಹುದು ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ.
ಇನ್ನೂ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಬೆಡ್, ಐಸಿಯು ಕೊರತೆ ಉಂಟಾಗುತ್ತೆ. ಬೆಡ್ ಗಳ ಕೊರತೆಯಾಗದಂತೆ ವಿಶೇಷವಾಗಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಹೇಳಿದ್ದಾರೆ.










