ಲೀಟರ್ ಹಾಲಿಗೆ 1.50 ರೂ. ಇಳಿಸಿದ ಮನ್ಮುಲ್.

40
firstsuddi

ಮಂಡ್ಯ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ. ಈ ಬರದ ನಡುವೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಗೆ ಶಾಕ್ ನೀಡಿದೆ. ಲೀಟರ್ ಹಾಲಿಗೆ 1.50 ರೂ. ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಇತ್ತ ಮನ್ಮುಲ್ ಹಾಲಿನ ದರ ಇಳಿಕೆ ಮಾಡಿದೆ. ಆದರೆ ಅತ್ತ ಪಶು ಆಹಾರದ ಬೆಲೆ ಏರಿಕೆಯಾಗಿದೆ. ಇದರಿಂದ ಹೈನುಗಾರಿಕೆ ನಂಬಿಕೊಂಡಿರುವ ಮಂಡ್ಯ ರೈತರು ಕಂಗಾಲಾಗಿದ್ದಾರೆ.

ಮನ್ಮುಲ್ ಆಡಳಿತ ಮಂಡಳಿ ನಿರ್ಧಾರಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಪಶು ಆಹಾರದ ಬೆಲೆ ಚೀಲಕ್ಕೆ 50 ರೂ. ಏರಿಕೆ ಮಾಡಿದೆ. ಈ ಪರಿಷ್ಕೃತ ದರ ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಮನ್ಮುಲ್ ಈ ಹಿಂದೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ 33.50 ರೂ ನೀಡುತ್ತಿತ್ತು. ಇದೀಗ 1.50 ರೂ. ಕಡಿತಗೊಳಿಸಿ 32 ರೂ. ನಿಗದಿ ಮಾಡಿದೆ.

ಬರಗಾಲದಲ್ಲಿ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ರೈತ ಸಂಘ ಕಿಡಿಕಾರಿದೆ. ಕೂಡಲೇ ದರ ಹೆಚ್ಚಳ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.