ವಸತಿ ಶಾಲೆಯಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣ ಶಿಬಿರಕ್ಕೆ ಅನುಮತಿ ಕೊಟ್ಟಿಲ್ಲ : ಕೋಟಾ ಶ್ರೀನಿವಾಸ ಪೂಜಾರಿ.

60
firstsuddi

ಕಾರವಾರ : ವಸತಿ ಶಾಲೆಯಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅವಕಾಶ ನೀಡಿಲ್ಲ ಎಂದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಯಲ್ಲಾಪುರ ಮತ್ತು ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್‌ಎಸ್‌ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅನುಮತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಕಾರವಾರದಲ್ಲಿ ಮಾತನಾಡಿದ ಅವರು, ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಕೊಡುತ್ತೇವೆ. ರಜೆ ಸಂದರ್ಭದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜನೆ ಮಾಡುತ್ತೇವೆ. ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಉತ್ತಮ ಸಂದೇಶ ಕೊಡುವ ಯಾವುದೇ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ ಎಂದು ಹೇಳಿದರು.

ನಿಷೇಧಿತ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ದೇಶ ಮೊದಲು ಅನ್ನೊ ಯಾವುದೇ ಸಂಸ್ಥೆಗೆ ಅವಕಾಶ ಕೊಡುತ್ತೇವೆ. ಇದು ಮೊದಲಿನಿಂದಲೂ ವಾಡಿಕೆ. ಈ ಹಿನ್ನೆಲೆಯಲ್ಲಿ ಅವಕಾಶ ಕೊಟ್ಟಿದ್ದೇವೆಯೇ ಹೊರತು ಆರ್‌ಎಸ್‌ಎಸ್ ಗೆಂದು ನಾವು ಅವಕಾಶ ಕೊಟ್ಟಿಲ್ಲ. ಟೀಕೆ ಮಾಡುವವರು ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಟೀಕೆ ಮಾಡಲಿ ಎಂದರು.