ಬೆಂಗಳೂರು : ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ ಜಾಕ್ ಮಂಜು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರಿಗೆ ಬಹಳ ಆತ್ಮೀಯರಾಗಿರುವ ಜಾಕ್ ಮಂಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಪ್ರಚಾರಕ್ಕಾಗಿ ಅವರು ಸಾಕಷ್ಟು ಓಡಾಟ ನಡೆಸಿದ್ದರು. ಈ ಒತ್ತಡದಿಂದಾಗಿ ಇಂತಹ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ. ಮಂಜು ಅವರ ಆರೋಗ್ಯ ಚೇತರಿಕೆಗಾಗಿ ಕಿಚ್ಚನ ಅಸಂಖ್ಯಾತ ಅಭಿಮಾನಿಗಳು ಹಾರೈಸಿದ್ದು, ಮಂಜು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.
ಜಾಕ್ ಮಂಜು ಸ್ಯಾಂಡಲ್ ವುಡ್ ನ ನಿರ್ಮಾಪಕರಾಗಿದ್ದು, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣವನ್ನು ಸಹ ಇವರೇ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ, ‘ಅಂಬಿ ನಿಂಗ್ ವಯಸ್ಸಾಯ್ತೋ!’,`ಲೈಫು ಇಷ್ಟೇನೆ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.








