ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ…

59
firstsuddi

ಬೆಳಗಾವಿ: ವಿಧಾನಪರಿಷತ್ ನ ನೂತನ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಆಯ್ಕೆಯಾಗಿದ್ದಾರೆ.

ಇಂದು ನಡೆದ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ 39 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಅರವಿಂದ್ ಅರಳಿ 26 ಮತಗಳನ್ನ ಪಡೆದಿದ್ದಾರೆ. ಅಂತಿಮವಾಗಿ ಪ್ರಾಣೇಶ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಬಸವರಾಜ್ ಹೊರಟ್ಟಿ ಘೋಷಣೆ ಮಾಡಿದರು.

ನೂತನ ಉಪ ಸಭಾಪತಿ ಪ್ರಾಣೇಶ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ನಾಯಕರು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಿಎಂ, ಪ್ರಾಣೇಶ್ ಅವರು ಸರ್ವ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸುತ್ತಾರೆ. ಎಂ.ಕೆ.ಪ್ರಾಣೇಶ್ ಅವರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿ ಪರಿಹಾರವನ್ನು ಪಡೆಯುವ ಸಜ್ಜನ ರಾಜಕಾರಣಿ. ಅವರ ನಡೆ, ನುಡಿ ಎರಡೂ ಒಂದು. ಬಹಳ ಸೌಮ್ಯ ಸ್ವಾಭಾವದವರು. ಅವರ ಮಾತುಗಳು ಕೂಡ ಬಹಳ ಸೌಮ್ಯ. ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಪಾತ್ರ ವಹಿಸಿದರು. ಆ ಭಾಗದ ರೈತರ, ಕಾಡಂಚಿನ ಜನರು, ಬುಡ ಕಟ್ಟು ಜನಾಂಗದವರ, ಕಾಫಿ ಬೆಳೆಗಾರರ ಸಮಸ್ಯೆ ಇರಬಹುದು. ಚಿಕ್ಕಮಗಳೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಒಡನಾಡಿಯಾಗಿ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿ, ಒಂದು ದಶಕಕ್ಕೂ ಹೆಚ್ಚಿನ ಕಾಲ ಕೆಲಸ ಮಾಡಿದ್ದಾರೆ ಎಂದರು.