ವೇಶ್ಯಾವಾಟಿಕೆ ದಂಧೆ ಆರೋಪ : ಕಿರುತೆರೆ ನಟಿಯ ಬಂಧನ…

66
firstsuddi

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಿರುತೆರೆಯ ಖ್ಯಾತ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಇವುಗಳ ಜೊತೆಗೆ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಎರಡು ಮಾಡೆಲ್ ಗಳು ಈ ರಾಕೆಟ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಪೊಲೀಸ್ ಅಧಿಕಾರಿ ಮನೋಜ್ ಸುತಾರ್ ಅವರಿಗೆ ಆರತಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸುಳಿವು ಸಿಕ್ಕಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಆರತಿಯನ್ನು ಸಂಪರ್ಕಿಸಿದ್ದಾರೆ. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು. ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಅಧಿಕಾರಿಗಳಿಗೆ ಕಾಂಡೋಮ್ ನೀಡಿದ್ದಾರೆ. ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಆರತಿ ವಿರುದ್ಧ ಕೇಸ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.