ಬೆಂಗಳೂರು : ಶಾಲೆಯಲ್ಲಿ ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಮ್ಮಲೂರು ಲೇಔಟ್ ಬಳಿ ನಡೆದಿದೆ. ವೇಣುಗೋಪಾಲ್(13) ಮೃತ ಬಾಲಕ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ವೇಣುಗೋಪಾಲ್ ಡಿ. 9ರಂದು ತನ್ನ ಸಹಪಾಠಿಯೊಂದಿಗೆ ಶಾಲೆಯಲ್ಲಿ ಜಗಳವಾಡುತ್ತಿದ್ದ ವೇಳೆ ಚಾಕುವನ್ನು ತೋರಿಸಿ ಸಹಪಾಠಿಗೆ ಹೆದರಿಸಿದ್ದಾನೆ. ಹೀಗಾಗಿ ಶಿಕ್ಷಕರು ವೇಣುಗೋಪಾಲ್ಗೆ ಬೈದು ಪೋಷಕರನ್ನು ಶಾಲೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರು ಶಾಲೆಯ ಮುಂಭಾಗ ವಿದ್ಯಾರ್ಥಿಯ ಶವವನ್ನು ಇಟ್ಟು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










