ಬೆಳೆ ಪರಿಹಾರವನ್ನು ಕೇಳಿದ್ದಕ್ಕೆ ಅಧಿಕಾರಿಗಳಿಂದ ಬೆದರಿಕೆ, ವಿದುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ…!

213
firstsuddi

ಮಂಡ್ಯ : ಬೆಳೆ ಪರಿಹಾರವನ್ನು ಕೇಳಿದ್ದಕ್ಕೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಮನನೊಂದು ರೈತರೊಬ್ಬರು ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಚಿಕ್ಕ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುಮಾರ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ ಎಂದು ಗುರುತಿಸಲಾಗಿದ್ದು, ಕುಮಾರ್ ಅವರು ತಾವು ಬೆಳೆದ ಬೆಳೆಗೆ ಸೂಕ್ತ ಪರಿಹಾರಕ್ಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, ಆದರೆ ಅಧಿಕಾರಿಗಳು ಪೊಲೀಸರಿಂದ ಕುಮಾರ್ ಅವರಿಗೆ ಬೆದರಿಕೆ ಹಾಕಿಸಿದ್ದಾರೆ. ಇದರಿಂದ ಮನನೊಂದ ರೈತ ಕುಮಾರ್ ಅವರು ತನ್ನ ಜಮೀನಿನಲ್ಲಿರುವ ವಿದ್ಯತ್ ಕಂಬವನ್ನು ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಮಾರ್ ಅವರನ್ನು ಮನವೊಲಿಸಿ ಕೆಳಗಿಳಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರು ಹರಸಾಹಸ ಪಡುವಂತಾಯಿತು.